ವಿಷ್ಣು ತತ್ವ ವಿನಿರ್ಣಯ
ಡಾ. ಹರಿದಾಸ್ ಭಟ್ಟ್
ಕಾರ್ಯವನ್ನು ಉಂಟು ಮಾಡುವ ಶಕ್ತಿ. ನೂಲಿನಿಂದ ಬಟ್ಟೆ. ವಸ್ತುವಿನ ಸ್ಮರಣೆ. ಮೇಜಿನ ಮೇಲೆ ಪುಸ್ತುಕ ಇದೆ. ವಾಕ್ಯ, ಪದ- ಎರಡು ಪದಾರ್ಥಗಳಿಗೆ ಸಂಬಂಧ. ಪುಸ್ತುಕ - ವಸ್ತುವಿನ ಸ್ಮರಣೆ. ಪದಗಳಿಂದ ಪದಾರ್ಥ ಸ್ಮರಣೆ. (ಶಕ್ತಿಗೆ ಮತ್ತೊಂದು ಹೆಸರು ಅಭಿದಾನ.)
ಕಾರ್ಯಾನ್ಮಿತ ವಸ್ತುಗಳ ಅರ್ಥ ಅಂತ ಮೀಮಂಸಕರು
ಹೇಳುತ್ತಾರೆ. ಮಾತು, ಶಬ್ದದಿಂದ
ಪದಾರ್ಥ - ಇದನ್ನು ಮೀಮಂಸಕರು ಅರ್ಥ ಅಂತ ಹೇಳುತ್ತಾರೆ.
ಆಚಾರ್ಯರು ಇದು ನಮ್ಮ ಸಿದ್ದಾಂತಕ್ಕೆ ವಿರೋದ ಅಂತ ಹೇಳುತ್ತಾರೆ. ಕ್ರಿಯ ಪವ್ರತ್ತಿ ನಿವ್ರತ್ತಿಗೋಸ್ಕರ ವಾಕ್ಯ ಪ್ರಯೋಗಮಾಡುವದು. ಮತ್ತೊಬ್ಬರಿಗೆ ಇಷ್ಟವಾದುದನ್ನು ತಿಳಿಸುವದು ಇಷ್ಟ ಸಾಧನ. ವೇದಗಳು ವಾಕ್ಯ - ಇಷ್ಟ ಸಾಧನ. ವೇದ ನಿತ್ಯ.
ವರ್ಣಗಳು ನಿತ್ಯ. ಮೀಮಂಸಕರು ಹೇಳುತ್ತಾರೆ
ಶಬ್ದ ತತ್ತ್ವ ಹುಟ್ಟುತ್ತದೆ.
ಶಬ್ದ
ತತ್ತ್ವ ಆಕಾಶದಂತೆ ವ್ಯಾಪಿಸಿದೆ. ೫೧ ಅಕ್ಷರ ತತ್ತ್ವ
ಇಡೀ ವಿಶ್ವದಲ್ಲಿ ವ್ಯಾಪಿಸಿದೆ. ಅ ಅನ್ನುವ ದ್ವನಿಯಿಂದ
ಅಕ್ಷರಗಳನ್ನು ತಿಳೀತೇವೆ. ವರ್ಣಗಳು ನಿತ್ಯ. ಇದು
ನಮ್ಮ ಸಿದ್ದಾಂತ. ಅಕ್ಷರಗಳು ವೇದ ಅಲ್ಲ. ಕ್ರಮಬದ್ದವಾಗಿ ಜೋಡಿಸಿರುವ ಅಕ್ಷರಗಳ ಮಾಲೆ - ವೇದ. ಆಚಾರ್ಯರು : "ಅಕ್ಷರಗಳು ಹುಟ್ಟುವದಿಲ್ಲ. ಅಕ್ಷರ ಜ್ಞಾನದಲ್ಲಿ ಕ್ರಮವಿದೆ. ವೇದ ಅಭೇದವನ್ನು ಹೇಳುತ್ತದೆ. ವೇದ ಅಪೂರ್ವ ವಿಷಯ ಹೇಳುತ್ತದೆ. ವೇದ ತಾತ್ಪರ್ಯ ಪರಮಾತ್ಮನ ಸ್ವರೂಪ". ಪ್ರಭಲ - ವೇದ.
ದುರ್ಬಲ - ಪ್ರತ್ಯಕ್ಷ. ಪ್ರತ್ಯಕ್ಷ - ಸಂಶಯ.
ದೂರದಲ್ಲಿನೋಡುವ ಮರ ಚಿಕ್ಕದಾಗಿಕಾಣಿಸುತ್ತದೆ.
ಚಂದ್ರ ೩ ಅಡಿ ಕಾಣಿಸುತ್ತದೆ. ಪ್ರಕೃತಿ ವಿರುದ್ದಆದುದು
ಆಗಮ ಅಂತ ಹೇಳಬಾರದು.
ಅನೇಕ ಜೀವರು ದೇವರನ್ನು(ಪರಮಾತ್ಮನನ್ನ್ನು) ಸೇರುತ್ತಾರೆ. ಐಕ್ಯ ಹೊಂದುವುದಿಲ್ಲ. ಸಮುದ್ರಕ್ಕೆ ಸೇರಿದ ನದಿಗಳು ಸಮುದ್ರದಹಾಗೆ. ಹೇಗೆ ಹಣ್ಣಿನಲ್ಲಿರುವ ಬೀಜ ಕಾಣಿಸುವದಿಲ್ಲವೋ, ಹಾಗೆ ದೇವರು ನಮ್ಮಲ್ಲಿ ಇದ್ದರೂ
ಕಾಣಿಸುವದಿಲ್ಲ.
ಜಡ, ಚೇತನಒಂದಾಗುವಿದಕ್ಕೆ ಸಾಧ್ಯವಿಲ್ಲ.
ಅದ್ವೈತಿಗಳು: - ಬ್ರಹ್ಮ ಸತ್ಯ, ಜಗತ್ತು ಅಸತ್ಯ ಅಂತ ಹೇಳುತ್ತಾರೆ. ದೇವರು ಚೇತನ, ಜಗತ್ತು ಜಡ. ಈ ಜಗತ್ತೆಲ್ಲ ದೇವರು.
ಒಂದು ಎರಡಾಗುವದಿಲ್ಲ. ಎರಡಾಗಿ ಕಾಣಿಸುತ್ತದೆ ಅಷ್ಟೆ.
ದೇಹದ ಸಂಪರ್ಕವಿಲ್ಲ ಪರಮಾತ್ಮನಿಗೆ. ಅವನು ಅಪ್ರಾಕೃತ. ಅವನಿಗೆ ಹುಟ್ಟಿಲ್ಲ.
ಭೇದವು ಧರ್ಮ ಸ್ವರೂಪ. ಯುಗ ಧರ್ಮವಲ್ಲ. ಯುಗ ಅಂದರೆ ಎರಡು. ಮೇಜು ಪುಸ್ತಕ - ಯುಗ ಧರ್ಮವಲ್ಲ. ಭೇದ ಮೇಜಿನಲ್ಲಿ ಇದೆ. ಭೇದವನ್ನು ತಿಳಿಯಬೇಕು. ಮಡಿಕೆ - ಅನುಯೋಗಿ. ಬಟ್ಟೆ ಪ್ರತಿಯೋಗಿ. ವಸ್ತುವನ್ನು ತಿಳಿದಾಗಲೆ ಭೇದ ಭಾವ ಬರುವದು. ಭೇದವು ಆಯಾಯ ವಸ್ತುವಿನ ಸ್ವರೂಪ. ಭೇದ ಬೇರೆ. ಶಬ್ದ ಬೇರೆ. ಪುಸ್ತಕದಲ್ಲಿ ಬೇಧವಿದೆ. ಶಬ್ದದ ಜ್ಞಾನ. ನಮ್ಮ ಸಿದ್ದಾಂತ ಭೇದವು ಧರ್ಮ ಸ್ವರೂಪ. ಅದ್ವೈತಿ: ಜೀವ, ಬ್ರಹ್ಮ ಅಭೇದ.. ಬ್ರಹ್ಮ
ಮಾತ್ರ ಸತ್ಯ.
ಧರ್ಮ ಅಂದರೆ ವಸ್ತು. ವಸ್ತು ತಿಳಿದರೂ ಭೇದ ತಿಳಿಯಬೇಕು.
ಉದಾಹರಣೆ: - ಹಾಲಿನಲ್ಲಿ ನೀರು. ಸುಣ್ಣದ ನೀರು.
ವಸ್ತುವು ಸ್ವರೂಪ.
ಹಾವು, ಹಗ್ಗ ಎರಡರ ಸಂಬಂಧ. ತರ್ಕ ಇದೆ.
ಪ್ರತ್ಯಕ್ಷ ಇಲ್ಲ. ಪ್ರತ್ಯಕ್ಷ ಹಾವು. ತರ್ಕ
ಹಗ್ಗ ಹಾವಲ್ಲ. ಪ್ರತ್ಯಕ್ಷ ಸಪೋರ್ಟ್ ಇದ್ದರೆ ತರ್ಕ
ಗೆಳ್ಳುತದೆ. ಅನುಭವಕ್ಕೆ ವಿರೋಧ ಬಂದರೆ ಅದು ಭ್ರಾಂತಿ. ಅನುಭವ, ಅನುಮಾನ ವೇದಕ್ಕೆ ವಿರುದ್ದ.
ಸಮುದ್ರಕ್ಕೆ ಸೇರಿದಮೇಲೆ ಗಂಗ, ಯಮುನ ನದಿ ಯಾವುದು ಅಂತ ತಿಳಿಯುವದಕ್ಕೆ
ಆಗುವಿದಿಲ್ಲ. ಪಶ್ಚಿಮದಿಂದ ಬಂದ ನದಿಗಳು ಪಶ್ಚಿಮಕ್ಕೆ ಹರಿಯುತ್ತವೆ. ಆ ನದಿಗಳು ಸಮುದ್ರದಲ್ಲೆ ಅವರ್ಶನ (ಸೇರಿಕೊಳ್ಳುತ್ತದೆ). ವಾಯುದೇವರು ಸಮುದ್ರದಿಂದ ಸೂರ್ಯನಿಂದ ತೆಗೆದು ಆಯಾಯ ನದಿಗಳಿಗೆ ಸೇರಿಸುತ್ತಾರೆ. ಸಮುದ್ರಕ್ಕೆ ಸೇರಿದ ಗಂಗೆ ನೀರು, ಗಂಗೆ ನೀರು ಅಂತ ತಿಳಿಯುವದಿಲ್ಲ. ವಾಯು
ದೇವರು ಸೂರ್ಯ ರಶ್ಮಿಗಳಿಂದ ಗಂಗೆಯ ನೀರನ್ನು ಗಂಗೆಗೆ,
ಯಮುನೆಯ ನೀರನ್ನು ಯಮುನೆಗೆ ಸೇರಿಸುತ್ತಾರೆ. ಸಮುದ್ರದಿಂದ
ಅವುಗಳು ಹುಟ್ಟಿಕೊಂಡಿವೆ. ಸಮುದ್ರವು ಸಮುದ್ರವಾಗಿಯೆ
ಇರುತ್ತೆ. ಜೀವಗಳು ಪರಮಾತ್ಮನ ಸೇರಿಕೊಳ್ಳುವ ಜ್ಞಾನವಿರುವದಿಲ್ಲ. ಜೀವ, ಈಶ್ವರ,ವೃಕ್ಷ ಬೇರೆ ಬೇರೆ. ಪರಮಾತ್ಮನು ಅದರೊಳಗೆ ಚೇತನದಿಂದ ಇರುತ್ತಾನೆ ಆಮೇಲೆ ಹೊರಗೆ ಬರುತ್ತಾನೆ. ವೃಕ್ಷದ ಕೊಂಬೆ ಹೋದರೂ ಜೀವವಿರುತ್ತೆ. ಅನಿರುದ್ದ ರೂಪ ಪರಮಾತ್ಮ ಹೋದರೆ ಮರ ಸತ್ತುಹೋಗತ್ತೆ. ನಿಯಾಮಕ ಪರಮಾತ್ಮ ಇದ್ದರೆ ಅದು ಜೀವ. ಆದುದರಿಂದ ಪರಮಾತ್ಮನ ಅಧೀನ ಜೀವ. ಯಾವಾಗ ಪರಮಾತ್ಮನು ಹೊರಗೆ ಬರುತ್ತಾನೊ ಆವಾಗ ಕೊಂಬೆ ಒಣಗಿಹೋಗುತ್ತೆ.
ಆದುದರಿಂದ ಜೀವ ಪರಾಮತ್ಮನ ಅಧೀನ.
ಪರಮಾತ್ಮನ ಜ್ಞಾನ ಯಾಕಿಲ್ಲ: -
ತಂದೆ ಮಗನಿಗೆ ಹೇಳಿದ "ಒಂದು ಹಣ್ಣನ್ನು
ಆಲದಮರದಿಂದ ತೆಗೆದುಕೊಂದು ಬಾ ಅಂತ". ಆಮೆಲೆ
ಮಗನಿಗೆ ಆ ಹಣ್ಣನ್ನು ಒಡಿ ಅಂದ. ಹಣ್ಣಿನಲ್ಲಿ ಬೀಜಗಳಿದ್ದವು. ಆ ಬೀಜಗಳ ಮದ್ಯದಲ್ಲಿ ಒಂದು ಬೀಜವನ್ನು ಹೊಡಿ ಅಂತ ತಂದೆ
ಮಗನಿಗೆ ಹೇಳಿದ ಆದರೆ ಆ ಬೀಜದಲ್ಲಿ ಏನು ಕಾಣುವದಿಲ್ಲ. ಅಂದರೆ ಅಣುವಾದ ಪರಮಾತ್ಮ ಕಾಣಿಸುವದಿಲ್ಲ. ಈ ಪುಟ್ಟ ಬೀಜ ಹೇಗೆ ಆಲದಮರವಾಯಿತು?
ಬೀಜದಿಂದ ಅದ್ಭುತ ಮರ ಬೆಳೆಯಿತು. ಹಾಗೆ ಪರಮಾತ್ಮ ನಮ್ಮ ಜೊತೆಯಲ್ಲಿ ಇದ್ದರೂ ಕಾಣಿಸಿಕೊಳ್ಳುವದಿಲ್ಲ. ಹೀಗೆ ತಂದೆ ಮಗನಿಗೆ ಬೀಜದ ಮೂಲಕ ಪರಮಾತ್ಮನನ್ನು ತೋರಿಸಿಕೊಟ್ಟ.
ತಂದೆ ಮಗನಿಗೆ ಹೇಳುತ್ತಾನೆ - ಉಪ್ಪು ನೀರಿಗೆ
ಹಾಕಿ ರಾತ್ರಿ ಹಾಗೆ ಇಟ್ಟು ಬೆಳಿಗ್ಗೆ ನೋಡು. ಬೆಳಿಗ್ಗೆ ಆ ನೀರು ಕುಡಿ. ಉಪ್ಪು ಇದ್ದರು ಕಣ್ಣಿಗೆ ಕಾಣಿಸುವದಿಲ್ಲ. ದೇವರು ಕಣ್ಣಿಗೆ
ಕಾಣಿಸುವುದಿಲ್ಲ. ಆದರೆ ಅದರ ಪ್ರಭಾವ ಇದೆ. ಹಾಗೆ
ಪ್ರಪಂಚದಲ್ಲಿ ಪರಮಾತ್ಮನ ಪ್ರಭಾವ ಕಾಣಿಸುತ್ತದೆ. ಪರಮಾತ್ಮ ಕಣ್ಣಿಗೆ ಕಾಣಿಸುವದಿಲ್ಲ. ದೇವರು ವೈಕುಂಠದಲ್ಲಿ
ಕಾಣಿಸುತ್ತಾನೆ. ಅವನ ಅಸ್ತಿತ್ವ ಇದ್ದೇ ಇದೆ. ಪರಮಾತ್ಮ ನಿತ್ಯ ವ್ಯಕ್ತಿ.
ಪರಮಾತ್ಮನನ್ನು ಹೇಗೆ ಕಾಣಬಹುದು?
ಒಬ್ಬ ಗುರುಗಳ ಮೂಲಕ ದೇವರನ್ನು ತಿಳಿದುಕೊಳ್ಳಬಹುದು.
ಗಂಧಾರ ದೇಶದ ಕಳ್ಳರು ಗಂಧಾರ ದೇಶದ ರಾಜಕುಮರನನ್ನು
ಎಳೆದುಕೊಂಡು ಸಂಪತ್ತೆಲ್ಲ ದೋಚಿ ಕಣ್ಣಿಗೆ ಬಟ್ಟೆಕಟ್ಟಿ ಬಿಟ್ಟುಬಿಟ್ಟರು. ಗಂಧಾರ ದೇಶದ ಒಬ್ಬ ವ್ಯಕ್ತಿ
ಅಲ್ಲಿಗೆ ಬಂದು ಆ ಕಣ್ಣಿಗೆ ಕಟ್ಟಿದ್ದ ಬಟ್ಟೆಯನ್ನು ಬಿಚ್ಚಿ ಕೇಳಿದಾಗಾ, ಆ ಸಜ್ಜನ ವ್ಯಕ್ತಿ
ರಾಜಕುಮಾರನಿಗೆ ತಂದೆ ತಾಯಿಯಂತೆ ಕಾಣುತ್ತಾರೆ.
ಹಾಗೆ ನಮಗೂ ಒಬ್ಬ ಗುರು ಸಿಕ್ಕಿದರೆ ಆ ಸಾಧನೆ ಮೂಲಕ ಭಗವಂತನನ್ನು ನೋಡಬಹುದು. ಮಾರ್ಗದರ್ಶನ ಗುರು ಬೇಕು.
ಮನುಷ್ಯನ ಶರಿರದಲ್ಲಿ ನಮ್ಮ ಕ್ರಿಯೆಗಳೆಲ್ಲ ದೇವರ
ಅಧೀನ ಹೇಗೆ?
ಮರಣ ಶೆಯ್ಯೆಯಲ್ಲಿ ಇದ್ದಾಗ ಮಾತು ನಿಲ್ಲತ್ತೆ.
ಪ್ರಾಣ ಶಕ್ತಿ ಅಡಗುತ್ತದೆ. ಮನುಷ್ಯ ಯಾರನ್ನು ಗಮನಿಸುವುದಿಲ್ಲ. ತನ್ನ ಭಂದುವರ್ಗದವರನ್ನು ಗುರುತಿಸಲಾರ.. ಇದರಿಂದ ಜೀವವು ಪರಮಾತ್ಮನ ಅಧೀನತ್ವ ಗುರಿತಿಸಿಕೊಳ್ಳಬಹುದು.
ಭೇದವಾದ - ಸತ್ಯವಾದ - ಪರಮಾತ್ಮನ ಅನುಗ್ರಹದಿಂದ ಅವನ ಸಮೀಪಕ್ಕೆ ಹೋಗುವ.
ಸ ಆತ್ಮಾ ಅತತ್ವವಾಸಿ ಅಂತ ಹೇಳಬೇಕು.
ನಿಯಮ್ಯ ಜೀವ. ನಿಯಾಮಕ ಪರಮಾತ್ಮ. ಜೀವ ಪರಮಾತ್ಮ ಬೇರೆ ಬೇರೆ. ನದಿದಳು ಸಮುದ್ರದಲ್ಲಿ ಐಕ್ಯ ಹೊಂದುವುದಿಲ್ಲ. ಸಮುದ್ರದ ಜೊತೆ ಬೆರೆಯುತ್ತದೆ. ಜೀವನು ಸಂಸಾರದಲ್ಲಿ ಗುರುಗಳ ಸಹಾಯದಿಂದ ಪರಮಾತ್ಮನನ್ನು
ಸೇರುತ್ತಾನೆ. ಜೀವನು ಪರಮಾತ್ಮನ ಸೊತ್ತನ್ನು ಅಪಹರಿಸಿದ
ಕಳ್ಳ. ಕದ್ದ ವಸ್ತು ಪರಮಾತ್ಮನ ಗುಣಗಳು. ನದಿ ಸ್ತ್ರೀ ಲಿಂಗ. ಸಮುದ್ರ ಪುಲ್ಲಿಂಗ. ನದಿ ಹೇಗೆ ಸಮುದ್ರವನ್ನು ಸೇರತ್ತೋ ಹಾಗೆ ಜೀವ ಪರಮಾತ್ಮನನ್ನು
ಸೇರುತ್ತೆ. ನದಿಯ ನೀರಿನ ಮೇಲನೆಯದು ಸಮುದ್ರವಾಗುತ್ತದೆ. ಜೀವ ದೇವರನ್ನು ಸೇರುತ್ತಾನೆ. ಜೀವನು ತನ್ನನ್ನು ಹೊಂದುವುದಿಕ್ಕೆ ಸಾಧ್ಯವಿಲ್ಲ. ಜೀವನು ತನ್ನಿಂದ ಐಕ್ಯ ಪಡೆಯುತ್ತಾನೆ. ಜೀವನು ಪರಮಾತ್ಮನನ್ನು ಹೊಂದುತ್ತಾನೆ. ಲಯ ಅಂದರೆ ಸೇರೋದು ಅಂತ ನಮ್ಮ ಅರ್ಥ. ಲಯ ಅಂದರೆ ಐಕ್ಯ ಅಂತ ಅವರ ಅರ್ಥ.
ತಂದೆಯನ್ನು ರಕ್ಷಣೆ ಮಾಡುವವನು ಮಗ. ಕರ್ಮಾನುಸಾರವಾಗಿ ಸಂಸಾರವನ್ನು ಅನುಭವಿಸುವ ಕರಾನುಶಾಯಿ. ನರಕವನ್ನು ಅನುಭವಿಸುವನು ಪುದ್ಗಲ. ಪ್ರಾಣ ಅಂದರೆ ದೇವರು. ಈ ಅರ್ಥವನ್ನು ವೇದವ್ಯಾಸದೇವರು ಮಾಡಿದ್ದಾರೆ. ಪ್ರಾಣ = ವಿಷ್ಣು = ಸಾಧುಗುಣ. ಜಗತ್ತಿಗೆ ಮೂಲ ಕಾರಣ ದೇವರು. ಮುಕ್ತನನ್ನು ಸಂಸಾರಿ ಅಂತ ಕರೀತೀವಿ. ದುಃಖ ಸಂಬಂಧವಿಲ್ಲದ ಚೇತನ - ವಿಷ್ಣು, ಲೆಕ್ಷ್ಮಿ.
ಜೀವದ ಒಳಗಡೆ ಪ್ರವೇಶ ಮಾಡುತ್ತಾನೆ ದೇವರು. ಪ್ರವೇಶ ಮಾಡಿದ ದೇವರು ಜೀವ. ಇದಕ್ಕೆ ಸಂಕರ್ಷಣ ಎಂಬ ಪರಮಾತ್ಮನಾಗಿ
ಪ್ರವೇಶ ಮಾಡುತ್ತಾನೆ. ಜೀವ ನಿಯಾಮಕ ಸಂಕರ್ಷಣ ಎಂಬ
ಹೆಸರಿನ ಆತ್ಮನಾಗಿ ಪ್ರವೇಶ ಮಾಡುತ್ತಾನೆ. ಚೇತನ, ಜೀವ ಬೇರೆ.
ಪರಮಾತ್ಮ, ಜೀವ ಬೇರೆ.
ಜೀವದ ಒಳಗಡೆ ಪರಮಾತ್ಮ. ದೇವರು ಜೊತೆಯಲ್ಲಿ
ಇರುವುದರಿಂದ ಸಂತೋಷ ಪಡೆಯುತ್ತಾನೆ. ಸುಖ ದುಃಖ ಅನುಭವಿಸುವನು
ಆತ್ಮ. ನಮ್ಮ ಇಂದ್ರಿಯಗಳು ಪರಮಾತ್ಮನ ಅಧೀನ. ಅದ್ವೈತ ದ ಐಕ್ಯ ಸಿದ್ದಾಂತವಲ್ಲ ಇದು. ಇದ್ದಿದ್ದನ್ನು ಇದ್ದಂತೆ ತಿಳಿಯುವುದು ಕಳ್ಳತನವಲ್ಲ. ಇದ್ದದ್ದನ್ನು ತಿಳಿಯದೆ ಇರುವದು ಕಳ್ಳತನ ಅಂತ ಹೇಳುವುದಕ್ಕೆ ಆಗುವುದಿಲ್ಲ. ಬ್ರಹ್ಮ ಭಾವ ಬಿಟ್ಟುಬಿಡಬೇಕು. ಐಕ್ಯ ಭಾವನೆ ಕಳ್ಳತನ. ಭೇದ ಭಾವನೆ ಕಳ್ಳತನವಲ್ಲ.
ತತು ತಮ್ ಅಸಿ = ತತ್ವಮಸಿ
ಶಾಸ್ತವನ್ನು ಮುಚ್ಚಿಟ್ಟು ತಮ್ಮ ಅಬಿಪ್ರಾಯವಂತೆ
ಶಾಸ್ತ್ರ ಹೇಳೋದು.
ಐಕ್ಯ ಪ್ರಯೋಜನ ತಮಸ್ಸು. ವೇದ ತಿಳಿದರೆ ಪ್ರಯೋಜನ ಮೋಕ್ಷ. ಅಯೋಗ್ಯವಾದ ಸಂಬಂಧವು ಜೀವನಿಗೂ ಪರಮಾತ್ಮನಿಗೂ ಐಕ್ಯ. ದರ್ಶನದಿಂದ ಪ್ರಸುಕ್ತಿ. - ಅದ್ವೈತ - ಐಕ್ಯ ವಾದ - ವೇದ, ಶಾಸ್ತ್ರ ತಿಳಿಯದೆ ಇರುವದು.
ಕರ್ಮವೆ ಸರ್ವಸ್ವ ಅಂತ ತಿಳಿಯಬೇಡಿ.
ಛಂದೋಪನಿಷತ್ತಿನ ೫ನೇ ಅಧ್ಯಾಯ - ಮಣ್ಣು ಮಡಿಕೆಗೆ
ಉಪಾದ. ಬ್ರಹ್ಮ ಜಗತ್ತಿಗೆ ಉಪಾದ. ಜಗತ್ತೆಲ್ಲವೂ ಬ್ರಹ್ಮ.
ಮಣ್ಣು - ಮಡಿಕೆ - ಮಣ್ಣು. ಬ್ರಹ್ಮ - ಜಗತ್ತು ಹುಟ್ಟುವಾಗ, ಇರುವಾಗ, ಮುಗಿದಾಗ.
ಶಂಕರ ಸಿದಾಂತ - ಬ್ರಹ್ಮ ಜಗತ್ತಾಗಿ ಕಾಣಿಸುತ್ತಾನೆ. ಬ್ರಹ್ಮ ಜಗತ್ತಿಗೆ ಉಪಾದಾನ.
ಹಗ್ಗದ ಜ್ಞಾನ ಬಂದರೆ ಹಾವಿನ ಜ್ಞಾನ ಹೋಗುತ್ತೆ.
ಬ್ರಹ್ಮನ ಜ್ಞಾನ ಬಂದಾಗ ಜಗತ್ತಿನ ಜ್ಞಾನ ಹೋಗಬೇಕು.
ಸತ್ಯ ತಿಳಿದಾಗ ಅಸತ್ ತಿಳಿಯೋದಿಲ್ಲ.
ಅಸತ್ - ರಜತ - ಹಗ್ಗ.
ಸತ್ - ಶುಕ್ತಿ(ಚಿಪ್ಪು) - ಹಾವು.
ಶುಕ್ತಿ ಜ್ಞಾನ ಬಂದಾಗ ರಜತ ಜ್ಞಾನ ಹೋಗುತ್ತೆ.
ಹಗ್ಗದ ತಿಳುವಳಿಕೆ ಬಂದರೆ ಹಾವಿನ ತಿಳುವಳಿಕೆ ನಾಶವಾಗುತ್ತೆ.
ಅದಿಷ್ಟಾನ ಜ್ಞಾನ ಬಂದರೆ ಆರೋಹಿತ ಜ್ಞಾನ ಬರುವುದಿಲ್ಲ.
ಪ್ರದಾನ ಜ್ಞಾನದಿಂದ ಅಪ್ರದಾನ ಜ್ಞಾನ ಬಂದಂತೆ.
ಪ್ರದಾನ ಜ್ಞಾನ ಅಪ್ರದಾನ ಜ್ಞಾನ
ಗುರು ಶಿಷ್ಯ
ತಂದೆ ಮಗ
ರಾಜ ಸೇವಕ
ಒಂದು ಜ್ಞಾನದಿಂದ ಇನ್ನೊಂದು ಜ್ಞಾನ ಬಂದಂತೆ. ಪರಮಾತ್ಮನ ಜ್ಞಾನದಿಂದ ಜಗಿತ್ತಿನ ಜ್ಞಾನ ಬಂದಂತೆ. ಕಾರಣ(ಪಾದ) ಜ್ಞಾನದಿಂದ (ಉಪಾದೇಯ)ಕಾರ್ಯ ತಿಳಿಯತ್ತೆ.- ಅದ್ವೈತ.
ಜಗತ್ತನ್ನು ತಿಳಿದಿದ್ದೀವಿ. ದೇವರನ್ನು ತಿಳಿದಾಗ.
ಪರಮಾತ್ಮ - ಕಾರಣ. ಜಗತ್ತ್ - ಕಾರ್ಯ.
ದೇವರನ್ನು ತಿಳಿದಾಗ ಜಗತ್ತನ್ನು ಸೃಷ್ಟಿ ಮಾಡಿದ್ದು. ಪರಮಾತ್ಮನ ಜ್ಞಾನ ಬಂದಾಗ ಜಗತ್ತು ಸತ್ಯ. ನಮ್ಮ ಹೋಲಿಕೆ ಇದ್ದರೆ ಸಾಕು. ಒಂದರಿಂದ ಒಂದು ಹುಟ್ಟಬೇಕಾಗಿಲ್ಲ.
ಶಬ್ದ, ವಸ್ತು. ಮಣ್ಣಿನ ವಿಕಾರ ವಸ್ತು (ರೂಪ) ಮಡಿಕೆ. ವಸ್ತು ಮಣ್ಣೆ. ಎರಡು ಮಣ್ಣೆ. ಉಪಾದಾನಲ್ಲಿಂತ (ಮಣ್ಣು) ಉಪಾದೇಯತ್ವ (ಮಡಿಕೆ) ಬೇರೆ ಅಲ್ಲ. ಬ್ರಹ್ಮಚಾರಿ - ಗ್ರಹಸ್ಥ - ವ್ಯಕ್ತಿ ಬದಲಾಗುವುದಿಲ್ಲ. ಸದ್ರಷವಾಗಿ ಒಂದು ವಸ್ತು ತಿಳಿದಾಗ ಇನ್ನೊಂದು ವಸ್ತು ತಿಳಿಯಬಹುದು. ಒಂದು ಜ್ಞಾನದಿಂದ ಇನ್ನೊಂದು ಜ್ಞಾನ ಬರೋದು. ಇದೇ ಮೂಲಭೂತ ವ್ಯತ್ಯಾಸ. ಶಾಲು, ಪಂಚೆ ಎರಡು ನೂಳಿನದೆ ಆದರೂ
ವ್ಯತ್ಯಾಸವಿದೆ. ಮಣ್ಣು ಮಾತ್ರ ಸತ್ಯ, ಮಡಿಕೆ ಸುಳ್ಳು. ಇದು ಅದ್ವೈತ ಸಿದ್ದಾಂತ.
ಪ್ರಾಕೃತ ಭಾಷೆಗಳು ಅನಿತ್ಯ. ಸಂಸ್ಕೃತ ಭಾಷೆ
ನಿತ್ಯ. ದೇವರು ಯತಾರ್ಥ ಪದಾರ್ಥ ಸೃಷ್ಟಿ ಮಾಡಿದ.
ದೇವರು ಸೃಷ್ಟಿ ಮಾಡಿದ ಪ್ರಪಂಚ ಯತಾರ್ಥ. ಇದು ತತ್ತ್ವ. ಶೃತಿ ಹೇಳೋದು ಸುಳ್ಳಲ್ಲ. ಅವನು ಯಜ್ಞದಲ್ಲಿ ಕೊಟ್ಟ ಹವಿಸ್ಸನ್ನು
ಸ್ವೀಕಾರ ಮಾಡಿ ಅಭೀಷ್ಟವನ್ನು(ಬೇಕಾದಿದ್ದನ್ನು) ಕೊಡುತ್ತಾನೆ.
ಸತ್ಯಾ ಸತ್ಯಾ ವಿಲಕ್ಷಣ - ಅದ್ವೈತಿಗಳು.
ಸ್ವಪ್ನ ಹೇಗೋ ಹಾಗೆ ಈ ಜಗತ್ತು. ಕೇವಲ ಅನುಭವಕ್ಕೆ ಇದೆ ಜಗತ್ತು. ಸ್ವಪ್ನ ಹೇಗೆ ಸುಳ್ಳೋ ಹಾಗೆ ಜಗತ್ತು ಸುಳ್ಳು ದೃಷ್ಟಾಂತ
ತೆಗೆದುಕೊಳ್ಳಬಾರದು. ಸಿಂಹ ಹೇಗೆ ಪರಾಕ್ರಮಿಯೋ ಹಾಗೆ
ಸತ್ಯತ್ವ ವೀರ. ನಾವು ಸ್ವಪ್ನ ನೋಡುವವರು. ನಮ್ಮ ಅಧೀನದಲ್ಲಿಲ್ಲ. ಜಗತ್ತನ್ನು ಮಾಯಮಯ ಅಂತ ವೇದದಲ್ಲಿ
ಹೇಳಿದೆ. ಮಾಯಮಯ ಡೊಂಬರಾಟವಲ್ಲ. ಮಾಯ ಅಂದರೆ ದೇವರ ಜ್ಞಾನ.
ದ್ವೈತ್ಯ ಸಿದ್ದಾಂತ್ತ - ಸತ್ಯತ್ವ ಸತ್ಯಂ -
ದೇವರ ಹೆಸರು . ಸತ್ಯಕ್ಕೂ ನಿಯಾಮಕ ದೇವರೆ. ಸೂರ್ಯ ಇದ್ದರೆ ಕಾಮನಬಿಲ್ಲು.
ಸತ್ಯಸ್ಯ ಸತ್ಯಂ - ವಿಷ್ಣುವಿನ ರಹಸ್ಯ ನಾಮ.
ಜ್ಞಾನ, ಆನಂದ, ಇಚ್ಛೆ, ಸುಖ -
ಒಂದೇ ಪರಮಾತ್ಮನಿಗೆ.
ವ್ಯತ್ಯಾಸ ಗುರುತಿಸುವುದಕ್ಕೆ ಕಾರಣ - ವೇದ. ಗುಣಧರ್ಮಗಳ ವ್ಯತ್ಯಾಸ ಹೇಳುವದು ವೇದ. ಎಲ್ಲಾ ಶೃತಿಗಳು ವೇದವನ್ನು ಹೇಳತ್ತೆ.
ಅತತ್ತ್ವಮಸಿ - ಈ ಶೃತಿ ನೀನು ಅವನಲ್ಲಿ. ಇದು ವೇದದಲ್ಲಿ ಹೇಳಿರುವದು. ಸ್ವರೂಪತಃ ಅಂದರೆ ದೇವರು. ಅಹಂ ಬ್ರಹಾಸ್ಮಿ ಶೃತಿ ಹೇಳುತ್ತೆ. ನಿದ್ರೆಯಲ್ಲೂ ಎದ್ದಾಗಳೂ ಅಹಂ ಇದೆ ಅದ್ವೈತಿ ಸಿದ್ದಾಂತ - ಅಹಂ ಎದ್ದಾಗ ಇಲ್ಲ. ಅಹಂ ಅಂತ ಕರೆದುಕೊಳ್ಳವನು ದೇವರು. ವೇದದಲ್ಲಿ ಅಹಂ ಅಂದರೆ ಪರಮಾತ್ಮನ ರಹಸ್ಯ ನಾಮ. ಶೃತಿ ವೇದ ಸತ್ಯ ಅಂತನು ಹೇಳಿದೆ. ವಿಷ್ಣುವಿನ ವೈಭವ ಸತ್ಯ ಆದರೆ ವೇದವು ಸತ್ಯವಾಗಬೇಕು. ಮುಕ್ತನಿಗೆ ನಾಶವಿಲ್ಲದ ಧರ್ಮ ಉಳ್ಳವನು ಎಂದು ಶೃತಿ ಹೇಳುತ್ತೆ.ಶ್ ಮುಕ್ತನಿಗೆ ಜ್ಞಾನವಿದೆ. ಅಭೇದ ಶೃತಿ ಇದೆ. ಸ್ವರೂಪ ಐಕ್ಯ ಅಲ್ಲ. ಇಬ್ಬರೂ ಒಂದೇ ಸ್ಥಾನದಲ್ಲಿ ಇದ್ದಾರೆ. ಅಲ್ಲಿ ಪರಮಾತ್ಮ ವ್ಯಕ್ತ ರೂಪದಲ್ಲಿರುತ್ತಾನೆ. ಜೀವಕ್ಕೆ ಅಸ್ವತಂತ್ರ ಅಪೂರ್ಣ. ಸ್ವರೂಪ ಐಕ್ಯವಾಗೋದಿಲ್ಲ. ಮೋಕ್ಷದಲ್ಲೂ ಜೀವ ವೀರೂಪ ರೂಪ. ಅಹಂ ಬ್ರಹ್ಮಾಸ್ಮಿ - ಬ್ರಹ್ಮನನ್ನು
ತಿಳಿದುಕೊಂಡರೆ ನೀವು ಬ್ರಹ್ಮರಾಗುತ್ತೀರಿ. ಸೂರ್ಯ
ಬೆಳಕಿನಲ್ಲಿ ಮುಳಗಿ ಹೋಗುತ್ತಾನೆ. ಪರಮಾತ್ಮ ಜ್ಯೋತಿಯಲ್ಲಿ
ಅವ್ಯಯ ಆಗುತ್ತಾನೆ. ಅವಿದ್ಯೆ ಸ್ವರೂಪತಃ ಅಸತ್ಯ. ಆತ್ಮ ಸತ್ಯ.
ಸತ್ಯಾಸತ್ಯಗಳು ಸೇರಿದರೆ ಜೀವ. ಏಕ ಜೀವ
- ಅವಿದ್ಯೆ- ೧ ಆತ್ಮ - ೧. ಜೀವ ಒಬ್ಬನೆ. ಇಡೀ ಪ್ರಪಂಚದಲ್ಲಿ ಕೋಟಿ ಜೀವ ಇದ್ದರೂ ಜೀವ ಒಂದೆ. ಬ್ರಹ್ಮ ಜ್ಞಾನ ಬಂದಮೇಲೆ ಉಳಿದವರೆಲ್ಲ ಜೀವರಲ್ಲ. ಇದು ಅದ್ವೈತ
ಸಿದ್ದಾಂತ. ಏಕ ಜೀವವಾದ. ಬಹು ಜೀವ ವಾದ. ಆಚಾರ್ಯರು: ಗುರು ಶಿಷ್ಯ ಸಂಬಂಧ ಏಕ ಜೀವ ವಾದ ದಲ್ಲಿ ಬರುವದಿಲ್ಲ. ಪಶ್ಚಿಮ ದಿಕಿನಲ್ಲಿ ಸಂದ್ಯಾವಂದನೆ - ಭ್ರಾಂತಿ. ಇದು ತಿಳಿದಮೇಲೆ ತಿರುಗ ಪಶ್ಚಿಮ ದಿಕ್ಕಿನಲ್ಲಿ ಸಂದ್ಯಾವಂದನೆ
ಮಾಡುವದಿಲ್ಲ. ಹಗ್ಗದಹಾವು. ಇದು ಕಲ್ಪಿತ. ಏಕ ಜೀವ ವಾದ - ಜೀವಕಲ್ಪಿತವಾಗಿದೆ. ವಾಸ್ತವ ಇಲ್ಲ. ಸ್ವಪ್ನ - ತಂದೆ, ತಾಯಿ - ಕಲ್ಪನೆ - ಹಾಗೆ
ಈ ಜೀವರೆಲ್ಲ ಒಬ್ಬ ಜೀವ- ಕಲ್ಪನೆ. ಮಲಿಗದಾಗ ಕಂಡ
ವಸ್ತು - ಕಲ್ಪನೆ. ಏಕ ಜೀವ ಯಾರು? ಗುರುನೋ, ಶಿಷ್ಯನೋ.
ಶಿಶ್ಯರಲ್ಲಿ ಯರೋ ಒಬ್ಬನು ಗುರು. ಗುರು ತತ್ತ್ವ
ಜ್ಞಾನ ಬಂದರೆ ಕಲ್ಪಿತನಾಗುತ್ತಾನೆ. ಗ್ರಂಥ ಅಧ್ಯಾಯನ ಮಾಡಿದಮೇಲೆ ಕಲ್ಪಿತನಾಗುತ್ತಾನೆ. ಭೇದವಾದಿ ಜೀವ.
ಐಕ್ಯ ವಾದ ಅನರ್ಥವಾಗುತ್ತದೆ. ಏಕ ಜೀವ ವಾದ
-ಶಾಸ್ತ್ರದ ಅರ್ಥವಿಲ್ಲ. ಯಾವ ವಸ್ತು ಹುಟ್ಟುವುದೋ
ಅದು ಸಾಯಬೇಕು. ಪ್ರಪಂಚಕ್ಕೆ ಆದಿ ಇದ್ದರೆ ಅಂತ್ಯವೂ
ಇರಬೇಕು. (ಸೃಷ್ಟಿ, ಪ್ರಳಯ). ಪ್ರಪಂಚ ಅಂದರೆ ಭೇದ. ಪ್ರ - ಒಳ್ಳೆಯ, ಪಂಚ = ಐದು ಐದರ
ಗುಂಪು. ಯಾವ ಭೇದಗಳನ್ನು ತಿಳಿದರೆ ಅದು ಒಳ್ಳೇದಾಗುತ್ತೆ. ಐದು ವಿಧವಾದ ಭೇದ -ಅಮುದಾಯ. ಇದಕ್ಕೆ ಆರಂಬವೂ ಇಲ್ಲ ಕೊನೆಯೂ ಇಲ್ಲ. ಅದು ಶಾಶ್ವತ. ಜಡ ಜೀವವಾಗುವುದಿಲ್ಲ. ಜೀವ ಜಡ ಆಗುವುದಿಲ್ಲ. ಭೇದವನ್ನು ಪರಮಾತ್ಮ ತಿಳಿದಿದ್ದಾನೆ. ಅವನು ಸರ್ವಜ್ಞ್ನ. ಪ್ರಪಂಚ ಅನಾದಿ.
ಪ್ರಪಂಚ ಅಂದರೆ ಭೇದ. ಭೇದವು ಸತ್ಯ. ಈ ಭೇದವು ಪರಮಾತ್ಮನಿಂದ ಸಂರಕ್ಷಿಸಲ್ಪಟ್ಟಿದೆ. ಇದು ಜ್ಞಾನಿಗಳ ಸಿದ್ದಾಂತ. ನೈರಾತ್ಮಿ ವಾದಿಗಳು: ಆತ್ಮವೆ ಇಲ್ಲ ಅಂತ ಹೇಳುತ್ತಾರೆ. ನೈರಾತ್ಮ - ಬೌದ್ದವಾದ - ಆತ್ಮ ಇಲ್ಲ. ಆತ್ಮನ ಗುಣ ಧರ್ಮಗಳು ಇಲ್ಲ. ಅದ್ವೈತ ವಾದ - ಆತ್ಮನಿದ್ದಾನೆ. ಆತ್ಮನಲ್ಲಿ ಧರ್ಮ ಇಲ್ಲ. ಕುಹಕ ತರ್ಕಗಳು.
ಒಂದು ಸತ್ಯಕ್ಕೆ ೩ ಅಸತ್ಯಗಳು ಬೇಕು.
ಅಧಿಷ್ಟಾನ / ಪ್ರಧಾನ / ಸುದೃಷ್ಟ
ಹಗ್ಗದ / ಹಾವು / ಹೋಲಿಕೆ.
ಆಕಾಶ
/ನೀಲಿ ಬಣ್ಣ / ನೀಲವಾದ ವಸ್ತು
ದೇಹ
/ ಆತ್ಮ / ಆತ್ಮ ಚೇತನ, ದೇಹ ಜಡ
ಆಚಾರ್ಯರು- ದೇಹದಲ್ಲಿ ಆತ್ಮನನ್ನು ಆರೋಪ ಮಾಡುವುದೇ
ಇಲ್ಲ. ಚೇತನವನ್ನು ಜಡ ಅಂತ ತಿಳಿಯುವ ಹಾಗೆ ಇಲ್ಲ.
ಅದ್ವೈತಿಗಳು- ಜಡದಲ್ಲಿ ಚೇತನ. ವಿಪರೀತ ಕಲ್ಪನೆ. ಹಗ್ಗದ ಅಜ್ಞಾನ.
ಅಜ್ಞಾನದ ಪರಿಣಾಮ. ಹಗ್ಗದ ಅಜ್ಞಾನದ ಚಿತ್ರ ಹಾವು. ಭೇದ ತಿಳಿಯುವದಿಲ್ಲ. ಭ್ರಾಂತಿ ಸತ್ಯ ಜ್ಞಾನ ಸತ್ಯ. ಜ್ಞಾನದ ಸ್ವರೂಪ - ಸತ್ಯ. ಜ್ಞಾನದ ವಿಷಯ - ಅಸತ್ಯ.
ಸ್ವಪ್ನಗಳಲ್ಲಿ ಕಾಣುವ ವಸ್ತು ಅಸತ್ಯ. ಧರ್ಮಾರೋಪ ಸ್ವಪ್ನದಲ್ಲಿದೆ.
ಬಹು ಜೀವ ವಾದ - ಬ್ರಹ್ಮ (ಮಾಯ ಶಕ್ತಿ, ಅವಿದ್ಯಾ ಶಕ್ತಿ),
ಈಶ್ವರ (ವಸ್ತು), ಜೀವ. ಮಾಯ ಶಕ್ತಿ ಬಳಿಸಿಕೊಂಡಾಗ ಈಶ್ವರ. ಅವಿದ್ಯೆ - ಮಿಥ್ಯೆ. ಭ್ರಾಂತಿ - - ಸ್ವಪ್ನ, ಮಾಯಾ
ಸೄಷ್ಟಿ. ಅವರ ದೃಷ್ಟಿಯಲ್ಲಿ ಜಗತ್ತು ಮಾಯ. ಜಾದುಗಾರನಿಗೆ ಹೇಗೆ ಕಾಗದವು ಕಾಣಿಸುವುದೋ ಹಾಗೆ ನಮಗೆ ರುಪಾಯಿ
ಕಾಣಿಸುವದು. ನಮಗೆ ಮೋಹ ಉಂಟುಮಾಡುತ್ತಾನೆ. ಜಾದುಗಾರನಿಗೆ ಒರಿಜಿನಲ್ ಕಾಣಿಸುವದಿಲ್ಲ. ಆದರೆ ದೇವರಿಗೆ
ಕಾಣುವಿದರಿಂದ ಇದು ಮಾಯದಿಂದ ಮಾಡಿದ ಜಗತ್ತು
ಅಲ್ಲ. ಮಂತ್ರವಾದಿ ತಾನು ಮಾಡಿದ ನ್ಟನ್ನು ನೋಡುವುದಿಲ್ಲ. ಅಧಿಷ್ಟಾನ ತಿಳುವಳಿಕೆ ಸರಿಯಾಗಿದ್ದರೆ ಭ್ರಾಂತಿ ಬರುವುದಿಲ್ಲ. ಅದಿಷ್ಟಾನ - ಬ್ರಹ್ಮ. ಬ್ರಹ್ಮನಿಗೆ ಸರಿಯಾದ ಜ್ಞಾನವಿದೆ. ಅವನಿಗೆ ಭ್ರಾಂತಿ ಬರುವದಿಲ್ಲ. ಬ್ರಹ್ಮನಿಗೆ ಜಗತ್ತು ಕಾಣುತ್ತಿದೆ. ಆದುದರಿಂದ ಜಗತ್ತು
ಸುಳ್ಳಾಗುವಿದಕ್ಕೆ ಸಾಧ್ಯವಿಲ್ಲ. ಕುಂಬಾರ ನಿಮಿತ್ತ
ಕಾರಣ. ಬ್ರಹ್ಮನೆ ಉಪಾದ್ನ, ನಿಮಿತ್ತ- ಅದ್ವೈಥಿ. ನಮ್ಮ ಸಿದ್ದಾಂತ - ಉಪಾದಾನ - ಪೃಕೃತಿ, ನಿಮಿತ್ತ - ಬ್ರಹ್ಮ. ದೇವರು - ಚೇತನ/ಜಗತ್ತು-ಜಡ. ಉಪಾದಾನ ಬೇರೆ, ನಿಮಿತ್ತ ಬೇರೆ. ಜಗತ್ತು ಹಗ್ಗದ ಹಾವಿನಂತೆ ಅಲ್ಲ.
ಬಹು ಜೀವ ವಾದ - ಆತ್ಮ ತತ್ತ್ವ ಒಂದೆ.ಉಪಾದಿಗಳೂ
ಅನೇಕ. ಉಪಾದಿ - ಸತ್ಯ. ಜಗತ್ತು ಸತ್ಯ.
ಉಪಾದಿ ಹೋದಾಗ ಆತ್ಮ ತತ್ತ್ವ ಒಂದೆ ಆಗುತ್ತೆ.
ಮಾಯ ವಾದ - ಬ್ರಹ್ಮ ಒಬ್ಬನೆ. ಒಂದು ಅನೇಕ ಆಗುತ್ತೆ. ಒಂದು ಉಪಾದಿ ಇಂದ ಎರಡು. ಕಣ್ಣಿಗೆ ಬೆಟ್ಟುಎರಡಾಗಿ ಕಾಣುತ್ತೆ.
ಆಚಾರ್ಯರು - ಬ್ರಹ್ಮ ತತ್ತ್ವ ಒಂದೆ. ಅವಿದ್ಯೆ ಇಂದ ಜೀವನು ಹುಟ್ಟಿಕೊಳ್ಳುತ್ತಾನೆ. ಬ್ರಮನಿಗೆ ಸಂಸಾರ ತಪ್ಪಿಡ್ಡಲ್ಲ. ನ್ಂಂ ದೇಹದ ಅಂಗಾಂಗಗಳಂತೆ ಬ್ರಹ್ಮ. ದುಃಖವು ಸತ್ಯ. ಮಾಯಾವಾದಿಗಳು- ದುಃಖವಿಲ್ಲ ಯಾರಿಗೂ.
ಶುದ್ದ್ದ ಬ್ರಹ್ಮನಿಗೆ ಉಪಾದಿ ಸಂಬಂಧವಿಲ್ಲ, ದುಖವೂ ಇಲ್ಲ. ಅಜ್ಞಾನದಿಂದ ಬ್ರಹ್ಮ ಜೀವ- ಉಪಾದಿ -ಮಿಥ್ಯೆ. ಉಪಾದಿ ಬಂದರೆ ಅಜ್ಞಾನ. ಅಜ್ಜಾನ ಇದ್ದರೆ ಉಪಾದಿ. ಇದು ಅದ್ವೈತಿಗಳ ವಾದ. ಇದಕ್ಕೆ ಆಚಾರ್ಯರು ಹೇಳಿದ್ದಾರೆ: ಉಪಾದಿ ಬ್ರಹ್ಮನಲ್ಲಿದೆ.
ಅಜ್ಞಾನ ಸಂಬಂಧ ಸ್ವಾಬಾವಿಕ. ಅಜ್ಞಾನ ಸತ್ಯ. ಉಪಾದಿ ಅಂದರೆ ಕಾರಣ. ಕಾರಣ ಇಲ್ಲದಿದ್ದರೆ ಸಂಬಂಧ. ಬ್ರಹ್ಮನಲ್ಲಿ ಅಜ್ಞಾನವೆ ಇಲ್ಲ. ಬ್ರಹ್ಮ ಅಜ್ಞಾನ ಅಂತ ಭ್ರಾಂತಿ ಇಂದ ಹೇಳುತ್ತೀವಿ. ಅಜ್ಞಾನದಿಂಅ ಭ್ರಾಂತಿ. ಕಣ್ಣು ಕಂಡ ಸತ್ಯ. ದೂರದಲ್ಲಿರುವ ಮರ ಗೇಣುದ್ದ ಕಾಣಿಸುತ್ತೆ. ಹತ್ತಿರ ಹೋದರೆ ಮರ ಎತ್ತರವಾಗಿ ಕಾಣತ್ತೆ. ಇದು ಅಪಟು ಪ್ರತ್ಯಕ್ಷ. ಜಗತ್ತು ಸತ್ಯ.
ಇದು ಪಟು ಪ್ರತ್ಯಕ್ಷ.
ಅನುಭವ ಯಾವತ್ತು ತಪ್ಪಾಗೋದಿಲ್ಲ. ಒಳಗಿನ ಅನುಭವ ತಪ್ಪಾಗೋದಿಲ್ಲ. ಸಾಕ್ಷಿ ಪ್ರತ್ಯಕ್ಷ ತಪ್ಪಾಗೊದಿಲ್ಲ. ಸುಖ ದುಃಖಕ್ಕೆ ಕಾರಣ
ಸತ್ಯ. ಸತ್ಯಕ್ಕೆ ನಿವೃತ್ತಿ ಇಲ್ಲ. ಅವರ ಸಿದ್ದಾಂತ - ಸುಖ ದುಃಖ ಅಸ್ವಾಬಿಕ. ಪ್ರಪಂಚ ಅಸತ್ಯ.
ಆಚಾರ್ಯರು - ಅಸತ್ಯ ಪ್ರಪಂಚ ಕಾಣಬೇಕಾದರೆ ಸತ್ಯ
ಇರಬೇಕು. ನಮ್ಮ ಸಿದ್ದಾಂತ - ಅಖಂಡ ವಸ್ತುವಿಗೆ ಭಾಗವಿದೆ.
ತ್ರಿಸ್ಕಂದ ಚೈತನ್ಯ ವಾದ - ಬ್ರಹ್ಮ - ಶುದ್ದವಾದವನು. ಈಶ್ವರ - ಸೃಷ್ಟಿಕರ್ತ-ಶಬಲ ಬ್ರಹ್ಮ-ಶುದ್ದ ವಿರುದ್ದ -
ಮಾಯ. ಜೀವ - ದುಃಖ ಸಂಪರ್ಕ. ಶುದ್ದ ಬ್ರಹ್ಮ - ನಿಶ್ಕ್ರಿಯ. ನಿರ್ಗುಣ ಬ್ರಹ್ಮ - ಮಾಯಾ ಶಕ್ತಿ ಬಳಿಸಿಕೊಳ್ಳುತ್ತಾನೆ. ಉಪಾದಿ ಇಂದ ಭೇದ.
ಶಬಲ ಬ್ರಹ್ಮ - ನಿತ್ಯ. ಶುದ್ದ ಬ್ರಹ್ಮ - ನಿತ್ಯ. ದೇಹದ ಕಾಲದ ಪರಿಮಿತಿ ಇಲ್ಲ.
ದೇಹ - ಅಖಂಡ. ಕಾಲ - ಪರಿಚ್ಛೇದ ಇದೆ. ಈ ವಿಭಾಗ ಸರಿಯಲ್ಲ.
ಉಪಾದಿ ಇಂದ ಜೀವ ಈಶ್ವರವಾದ. ಸುಖ ದುಃಖ ಬರುವುದರಿಂದ ತರ್ಕತೆ ಇಲ್ಲ. ಶುದ್ದ ಬ್ರಹ್ಮ, ಶಬಲ ಬ್ರಹ್ಮ ಇಬ್ಬರೂ ವ್ಯಾಪ್ತ
- ಅವರ ಸಿದ್ದಾಂತದಲ್ಲಿ ಈಶ್ವರನಿಗೆ ದುಃಖ ಇದೆ ಅಂತ ಒಪ್ಪಲ್ಲ.
ವಿಶಿಷ್ಠ - ಜೀವ, ಅನಿತ್ಯ, ಮೋಕ್ಷವಿಲ್ಲ.
ನಮ್ಮ ಸಿದ್ದಾಂತ - ಉಪಾದಿ ಸತ್ಯ. ಶರೀರ ಬೇರೆ
ಬೇರೆ. ಕರ್ಮ ಬೇರೆ ಬೇರೆ. ಕರ್ಮ ಭೇದ, ಆತ್ಮ ಭೇದ ಅನಿವಾರ್ಯ - (ಅನ್ಯೋನ್ಯಷ್ಯ).
ಬ್ರಹ್ಮ ನಿರ್ಗುಣವಾದರೆ ಪ್ರತ್ಯಕ್ಷದಿಂದ ತಿಳಿಯುವುದಿಕ್ಕೆ
ಆಗುವುದಿಲ್ಲ. ಅವನನ್ನು ತಿಳಿಯುವ ಸಾಧನ ವೇದ, ಉಪನಿಷತ್ತು.
ಅದ್ವೈತಿ ವಾದ - ಅವನನ್ನು ಯಾರು ತಿಳಿಯಲಾರದ
ವಸ್ತು. ಅವೇದ್ಯ. ಅವನನ್ನು ಅವನೆ ತಿಳಿಯಲಾರ. ಜ್ಜ್ಞಾನವೆ ಆತ್ಮ. ಆತ್ಮಕ್ಕೆ ವಿಷಯವಿಲ್ಲ.
ಆಚಾರ್ಯರು - ಜ್ಞಾನ ಕ್ರಿಯೆ. ವಿಷಯ - ಆಶ್ರಯ ಇರಬೇಕು.
ದ್ವಿತೀಯ ಪರಿಚ್ಛೇದ
ಯಾರಿಗೆ ನಾಶವಿಲ್ಲವೋ ಅವರು ಅಕ್ಷರ. ಯಾವ ಜೀವರಿಗೆನಾಶವಿಲ್ಲ. ಲೆಕ್ಷ್ಮಿಯನ್ನು ಬಿಟ್ಟರೆ ಎಲ್ಲರು ಕ್ಷರರು. ಯಾವ ಶರೀರಕ್ಕೆ ನಾಶವಿದೆಯೋ ಅವರು ಕ್ಷರರು. ಲೆಕ್ಷ್ಮಿದೇವಿಯ ದೇಹ ನಿತ್ಯವಾದುದರಿಂದ ಅವರು ಅಕ್ಷರರು. ಕ್ಷರಾಕ್ಷರ ಸಮತೀತ - ಪರಮಾತ್ಮ. ಬ್ರಹ್ಮ, ದೇವತೆಗಳೂ ಕ್ಷರರು. ಅವರ ಶರೀರಕ್ಕೆ ನಾಶವಿದೆ. ಪರಮಾತ್ಮ ಸಾತ್ವೀಕ ಜೀವಕ್ಕೆ ಮೋಕ್ಷ ಕೊಡುತ್ತಾನೆ. ಪರಮಾತ್ಮನಿಗೆ ದೋಷಗಳಿಲ್ಲ. ಆದುದರಿಂದ ಅವನು ಸ್ವತಂತ್ರ. ಅವನು ಚೇಷ್ಠೆಯಲ್ಲಿ ಇರುವವನು. ನಮಗೆ ಚೇಷ್ಠೆ ಕೊಡುವವನು. "ಬ್ರಹ್ಮ, ರುದ್ರ ಅವರವರ
ಪದವಿಗೆ ತರುವ ಸಾಮರ್ತ್ಯ ನನಗಿದೆ. ನಾನು ಬ್ರಹ್ಮನನ್ನು
ನಾಭಿಯ ಮೂಲಕ ಹಡೆದೆ. ಶಿರವೆ ಸಂಹಾರ ಶಕ್ತಿ ಎನಿಸಿದ
ರುದ್ರನಿಗೆ ನಾನು ಬ್ರಹ್ಮನನ್ನು ವಿರೋಧಿಸುವದಿಕ್ಕೆ ಬಿಲ್ಲುಕೊಟ್ಟೆ. ಬ್ರಹ್ಮನನ್ನು ಕೊಲ್ಲುವಿದಕ್ಕೆ ಬಿಲ್ಲನ್ನು ಕೊಟ್ಟವನು ನಾನು. ಬ್ರಹ್ಮನಿಗೆ ಪಂಚಮುಖ ಮೊದಲು. ಐದನೆಯ ತಲೆಯನ್ನು ರುದ್ರ ಸಂಹಾರ ಮಾಡಿದ. ಬ್ರಹ್ಮ ಹತ್ಯ
ಪಾಪ ಬಂತು. ಬ್ರಹ್ಮ, ರುದ್ರ,
ಲೆಕ್ಷಿ ನಾನು ಹೇಳಿದಂತೆ ಕೇಳುವರು". "ನನಗೂ ಮೀರಿದ ವ್ಯಕ್ತಿ ಇನ್ನೊಬನಿದ್ದಾನೆ ಸಮುದ್ರದ
ಮದ್ಯದಿ ನೀರಿನಲ್ಲಿ ನನಗೆ ಕಾರಣವಾದವನು ಇದ್ದಾನೆ.
ಜಗತ್ತಿನ ಉತ್ಪತ್ತಿ ಕಾರಣಳು ಲೆಕ್ಷ್ಮಿಯಿಂದ ಹುಟ್ಟಿದರು." ಜೀವರನ್ನು ಭೂಮಿಯಲ್ಲಿ ಸೃಷ್ಠಿ ಮಾಡಿದ. ನಾವು ಮಾಡಿದ ಕರ್ಮ ಗಳನ್ನು ವಾಯುದೇವರು ಪರಮಾತ್ಮನಿಗೆ ಅರ್ಪಿಸುತ್ತಾರೆ. ಜೀವರನ್ನು ಪಂಚರಾತ್ಮಕಗಳಿಂದ ಅವರವರ ಕರ್ಮಾನುಸಾರ ಪರಮಾತ್ಮ
ಸೃಷ್ಠಿ ಮಾಡಿದ. ಪರಮಾತ್ಮನಿಗಿಂತ ಸೂಕ್ಶ್ಮವಾದದ್ದು
ಯಾವುದೂ ಇಲ್ಲ. ಆಕಾಶಗಿಂತ ಉತ್ತಮ. ಕಣ್ಣಿಗೆ ಕಾಣದ ಸ್ವಭಾವ ಅವ್ಯಕ್ತ.
ಅಜ್ಞಾನ ಮೀರಿ ನಿಂತವನು. ಪೃಕೃತಿ ತತ್ತ್ವವನ್ನು
ಮೀರಿ ನಿಂತವನು. ಅವರವರ ಅಭೀಷ್ಠವನ್ನು ಕರಿಣಿಸುವನು. ಅಹಂಕಾರ ತತ್ವದ ಮೂಲಕ ರುದ್ರ ಪದವಿಯ ಮಹಿಮೆಯನ್ನು ಕೊಟ್ಟವನು.
ಪರಮಾತ್ಮನ ಪ್ರಸಾದದಿಂದ ರುದ್ರ, ಅಶ್ವಿನಿಯವರು ಅವರವರ ಪದವಿಯನ್ನು
ಅವರಿಗೆ ಕೊಟ್ಟವನು. ಪರಮಾತ್ಮನಿಂದ ಕ್ಷರ ಜೀವರು ಹುಟ್ಟಿದ್ದಾರೆ. ಸತ್ವಗುಣ ಸಂಪನ್ನ ಪರಮಾತ್ಮ. ಆದುದರಿಂದ ವಾಸುದೇವ. ಪ್ರಪಂಚಕ್ಕಿಂತ ಉತ್ತಮ ಭಗವಂತ. ನಾರಾಯಣನಿಗೆ ಸರ್ವನಾಮತ್ವ ಇದೆ. ವಿಷ್ಣುವಿಗೆ ಸರ್ವ ನಾಮತ್ವವಿದೆ. ಸರ್ವರೂಪನಾದುದರಿಂದ ಸರ್ವನಾಮ. ದೇಹ ಸಂಬಂಧ ದೋಷವಿಲ್ಲ. ಸರ್ವ ನಾಮ ಬೇರೆ ದೇವತೆಗಳಗಿಲ್ಲ. ವಿಷ್ಣುವಿನ ಜನಕ ವಾಯುದೇವ. ಬೌತೀಕ ಸಂಬಂಧವಿಲ್ಲ. ಜಡವಾದ ದೇಹದ ಸಂಬಂಧವಿದೆ ಪರಮಾತ್ಮನಿಗೆ. ಜಡದ ಸಂಪರ್ಕವೇ ಇಲ್ಲ ದೇವರಿಗೆ. ಆಚಾರ್ಯರ ಸಿದ್ದಾಂತ: - ದೇವರ ದೇಹವು ಅನಾದಿ.
ತೃತೀಯ ಪರಿಚ್ಛೇದ
ಬ್ರಹ್ಮನಿಗೆ ದೋಷವಿಲ್ಲ. ನಿತ್ಯವಾದ ಸುಖರೂಪ ದೇಹ. ನಮ್ಮಲ್ಲಿ ದೇವರು ಬೇರೆ ಅಲ್ಲ, ಗುಣ ಬೇರೆ ಅಲ್ಲ. ದೇವರು/ಸುಖ ಎರಡು ಒಂದೆ. ವಿಶೇಷ ಕ್ರಿಯೆ ಇರುವದರಿಂದ ದೇವರಲ್ಲಿ ಗುಣ. ನೀರಿನಲ್ಲಿ ತಂಡಿ ಇದೆ. ನೀರು, ತಂಡಿ ಬೇರೆ ಅಲ್ಲ. ಬೆಂಕಿಯಲ್ಲಿ ಬಿಸಿ ಇದೆ.
ಬೆಂಕಿ, ಬಿಸಿ ಬೇರೆ ಅಲ್ಲ.
ವಿಶೇಷ ಗುಣ. ಇದು ದೇವರ ಸ್ವಭಾವ. ದೇವರಲ್ಲಿ ಅಭೇದವಿದೆ. ಅಭೇದವು ಬ್ರಹ್ಮ ಸ್ವರೂಪ. ಅಬಿನ್ವತ್ವವಿದೆ ಬ್ರಹ್ಮನಲ್ಲಿ. ಬ್ರಹ್ಮ ಅಭೇದ ಒಂದೆ. ಬಟ್ಟೆ: - ಬಿಳೀ ಬಟ್ಟೆ ವಿಶೇಷಣ. ಬ್ರಹ್ಮನಲ್ಲಿ ಅಭೇದ ವಿಶೇಷಣ ಅಂತ ತಿಳಿಬೇಕು.ಬೇಕು. ಜ್ಞಾನವೆ ದೇವರು. ಜ್ಞಾನ ಅವನ ಸ್ವರೂಪ ಅವನಲ್ಲಿ ಜ್ಞಾನವಿದೆ ಅಂದರೆ ವಿಶೇಷಣ. ಪರಮಾತ್ಮನಲ್ಲಿ ಜ್ಞಾನ, ಆನಂದ,
ಕ್ರಿಯೆ ಇದೆ. ಎಲ್ಲಾ ಪ್ರದೇಶದಲ್ಲೂ ಗಾಳಿ ಇದೆ. ಆಕಾಶ ಎಲ್ಲಾ ಕಡೆ ಇದೆ. ಆಕಾಶದಲ್ಲಿ ಆಕಾಶವಿರುವ ಹಾಗೆ ದೇವರಲ್ಲಿ ಗುಣವಿದೆ. ಕಾಲವು
ನಿತ್ಯ. ಜೀವವು ನಿತ್ಯ. ನಾವು ಪರತಂತ್ರರು. ದೇವರು
ಸ್ವತಂತ್ರ. ಮೋಕ್ಷ ಬರಬೇಕಾದರೆ ತತ್ತ್ವ ಜ್ಞಾನಬೇಕು.
ಆರಣ್ಯಕ - ರಹಸ್ಯವಾದ ಉಪದೇಶ. ಋಗ್ವೇದಕ್ಕೆ ಸಂಬಂಧಪಟ್ಟ ಉಪದೇಶ. ಮೊಟ್ಟಮೊದಲು ಮಹ್ದ ಭಾವಂತ. ಐತರೇಯದಲ್ಲಿ ಭಗವಂತನ ಒಂದು ರೂಪ. ಇತರೆ ಭಗವಂತನ ಮೊದಲ ಹೆಂಡತಿ. ಎರಡನೆ ಹೆಂಡತಿ ಕರಿಯ ಶ್ರೀಲೆಕ್ಷ್ಮಿ. ಬ್ರಹ್ಮಾದಿ ದೇವತೆಗಳು ಆಸುರಾದರೆ. ಬ್ರಹ್ಮ ದೇವರ ಮಗ ವಿಶಾಲ. ಇಡಿ ಜಗತ್ತಿನ ಐಶ್ವರ್ಯಕ್ಕೆ ವಿಭೂತಿ ಅಂತ ಕರೀತಾರೆ.
ಕರ್ಮ - ತಿಳಿದು ಮಾಡುವದು, ಮಾಡಿ ತಿಳಿಯುವುದು.
ಅವನದು ಅಕ್ಷಯ ಪಾತ್ರ. ಅವನು ಸ್ವಯಂ ಪೂರ್ಣ.
ಸತ್ಯಂ - ಸಾಧು ಗುಣಗಳು , ಎಲ್ಲ ಗುಣಗಲು ಅವನಲ್ಲಿವೆ. ಅವನು ಪರಾಧೀನನಾಗಿದ್ದಾನೆ.
ಹಸಿ ಮಾಂಸ ತಿನ್ನುವರು - ಪಿಶಾಚಿಗಳು
ಆಕಾಶದಲ್ಲಿ ಆಚೆ ಈಚೆ ಹೋಗುವರು.
ವಂಗಾವದ - ಯಾರಿಂದ ನಾವು ರಕ್ಷಣೆ ಆಗಬೇಕು ಅವರು
ರಾಕ್ಷಸರು.
ವಾಯುದೇವರಿಗೆ ನಾಲ್ಕು ಸಂಪತ್ತಿದೆ. -ಜ್ಞಾನ, ಐಶ್ವರ್ಯ, ಧರ್ಮ, ವೈರಾಗ್ಯ.
ಪ್ರಳಯ ಕಾಲದಲ್ಲೂ ಆಕಾಶದಲ್ಲಿ ಎಚ್ಚರವಿರುವವರು.
ಜನರಿಂದ ಅರ್ಚನನಾದರಿಂದ ಅವನಿಗೆ ಅರ್ಕ. ಭಗವಂತನ ಆವಿಶ್ಕಾರ ಬೆಂಕಿಯಲ್ಲಿ ಆಗುತ್ತೆ. ಹೋಮವನ್ನು ನಿಷ್ಕಾಮವಾಗಿ ಮಾಡಬೇಕು. ಅಂತಃಕರಣ ಶುದ್ಧಿಆಗುತ್ತೆ ಆದಿತ್ಯನ ಮೂಲಕ ದೇವರು ಕಾಣುತ್ತಾನೆ. ಋಷಿಗಳು ಸೂರ್ಯನ ಮೂಲಕ ಉಪಾಸನೆ ಮಾಡುತ್ತಾರೆ. . ದೇವತೆಗಳು
ವಾಯುವಿನ ಮೂಲಕ ಉಪಾಸನೆ ಮಾಡುತ್ತಾರೆ. ವಾಯುದೇವರು
ಯಾವಾಗಳು ಶುದ್ಧಿ. ಗಣಗಳಿಂದ ವಾಸನೆ ಬರುವದು. ಶುದ್ಧಿಮಾಡಲು ವಾಯುದೇವರು. ವಾಯುದೇವರು ಇಲ್ಲದಿದ್ದರೆ ಅಶುದ್ಧಿ. ಪವಿತ್ರ ಮಾಡುವವರು
ವಾಯುದೇವರು. ಸೂರ್ಯನ ಮಧ್ಯದಲ್ಲಿ ಭಗವಂತ ಎಲ್ಲರನ್ನು
ನೋಡುತ್ತಾನೆ. ಆದಿತ್ಯ ಎಲ್ಲವನ್ನು ಆಧಾರ ಮಾಡುತ್ತಾನೆ. ಪವಮಾನ ಎಲ್ಲಾಕಡೆ ಇರುತ್ತಾನೆ. ಸಂಸಾರದಿಂದ ಪಾಪವನ್ನು ಶುದ್ಧೀಕರಣ ಮಾಡಿ ಆನಂದದಲ್ಲಿ ಮುಳಿಗಿಸುತ್ತಾನೆ.
ಬೃಹತಿ ಛಂದಸ್ಸಿನ ಹೆಸರು. ೨೩೬ ಅಕ್ಷರಗಳ ಛಂದಸ್ಸು. ಶಸ್ತ್ರ ಮಂತ್ರ. ಕೂತಿಕೊಂಡು ಸಾಮವೇದ ಹಾಡುತ್ತಾರೆ. ಇಡೀ ವೇದದ ಸೂಪರ್ ವೈಸರ್ ಬ್ರಹ್ಮ. ಬೃಹತಿಮಂತ್ರ ಶಸ್ತ್ರ ಮಂತ್ರ. ೧,೦೦೦ ಮಂತ್ರವಿದೆ. ಶಸ್ತ್ರ ಅಂದರೆ ಅನ್ನ ಅಂತ ಕರೀತಾರೆ. ೭೨,೦೦೦ ಅಕ್ಷರಗಳಿವೆ. ಅಸೀತಿ
೮೦. ೩ ಋಖ್ಖುಗಳ ಗುಂಪು. ಸುಮಾರು ೧೪,೦೦೦ ಮಾತ್ರೆಗಳು.
ಬಿದ್ದವನನ್ನು ಎಬ್ಬಿಸವವನು ಉಕ್ತ.
ದೇಶ, ಕಾಲ,
ಗುಣಗಳಲ್ಲಿ ಅತ್ಯಂತ ವಿಸ್ತಾರವುಳ್ಳವನು ಭಗವಂತ. ಅವನೇ ಪೃಥ್ವಿ. ಅವನೇ ಉಕ್ತ. ಗರುಡನ ಒಳಗೆ ಇರುವದು ಭಗವಂತ ಮುಖ್ಯವಾದ ಅರ್ಕ. ಗರುಡ ದೇವರು ಸುಪರ್ಣ. ಮಧ್ಯದಲ್ಲಿ ಇರುವದು ಅಂತರಿಕ್ಷ. ಅಂತರಿಕ್ಷದಲ್ಲಿ ಇರುವ
ವಾಯು ಅರ್ಕ. ಅರ್ಕ ಅಂದರೆ ಗತಿ ಸಾಧನ. ದೌ - ಅದು ದೇವೆಂದ್ರನ ಲೋಕ. ಅದು ಉಕ್ತ. ಆದಿತ್ಯನು ಅರ್ಕ. ೩೦ ದಿನಗಳಲ್ಲಿ ಒಂದು ರಾಶಿಇಂದ ಇನ್ನೊಂದು ರಾಶಿಗೆ ಹೋಗುತಿರುತ್ತಾನೆ. ಭಗವಂತ ತಾನೆ ಸ್ವತಃ ವಾಹನ. ೩ ಋಕ್ ೮೦ ಮಂತ್ರಗಳು ಅಶೀತಿ. ಭಗವಂತನ ನಾಳಿಗೆ ಉಕ್ತಾರವ. ಉಕ್ತಾವರ ಎಲ್ಲರನ್ನು ಎಬ್ಬಿಸಿದ. ಆಮೇಲೆ ಸೃಷ್ಟಿಮಾಡಿದ.
ಬಯಸಿದ್ದು ಸಿಕ್ಕದೆಹೋದರೆ ದುಃಖವಾಗುತ್ತದೆ. ನಮ್ಮ ದೇಹದಲ್ಲಿ ಭಗವಂತ ಇದ್ದಾನೆ. ಸುಖ ಅಂದಮೇಲೆ ಹಿರಣ್ಮಯ ಭಗವಂತ. ಯಾರು ಭಗವಂತನನ್ನು ಹಿರಣ್ಮಯ ಅಂತ ಉಪಾಸನೆ ಮಾಡುತ್ತಾರೊ
ಅವರೆಲ್ಲರು ಹಿರಣ್ಮಯವಾಗಿರುತ್ತಾರೆ. ಭಗವಂತನನ್ನು
ಆಶ್ರಯ ಮಾಡುವರಿಗೆ ಎಲ್ಲಾ ಸಂಪತ್ತನ್ನು ಕೊಡುತ್ತಾನೆ.
ವಾಯುದೇವರುಜೀವೋತ್ತಮ. ಎಲ್ಲಾ ದೇವತೆಗಳಿಗಿಂತ
ಉತ್ತಮ. ಪ್ರಾತಃ - ಹರಿವಾಯುಗಳ ಹೆಸರು. ಸ್ವಾಯಂ - ಹರಿವಾಯುಗಳ ಹೆಸರು. ಒರಾಣ - ಹಗಲಿಗೆ ನಿಯಾಮಕ. ಅಪಾನ - ರಾತ್ರಿ ನಿಯಾಮಕ. ವಾಕ್ - ಅಗ್ನಿ ದೇವತೆ. ಚಕ್ಷು - ಆದಿತ್ಯ. ಮನಸ್ಸು - ಚಂದ್ರ (ಯಜ್ಞ್ನ ಯಾಗಾದಿಗಳಿಗೆ ಮನಸ್ಸಿಗೆ ಪ್ರೇರಣೆ.)/ಇಂದ್ರ/ರುದ್ರ/ಸ್ಕಂದ.
ದಿಕ್ಕಿನ ದೇವತೆಗಳು - ಇಂದ್ರ, ಅಗ್ನಿ, ಯಮ, ನೈರುತ್ಯ, ವರುಣ, ವಾಯು, ಕುಬೇರ, ಈಶಾನ್ಯ, ಪರಬ್ರಹ್ಮ.
ಆತ್ಮ/ಪಿಂಡಾಂಗ/ಶರೀರ
ಕಳಿಸಲ್ಪಟ್ಟ ದೇವತೆಗಳ ಸಮಾಗಮ ಈ ಶರೀರ. (ಆತ್ಮ - ಶರೀರ)
ಚಂದ್ರ ವೇದ ಅಧ್ಯಾಯನ ಮಾಡಬೇಕಾದರೆ ಚಂದ್ರನಲ್ಲಿ
ಪ್ರಾರ್ಥನೆ ಮಾಡಬೇಕು.
ವೇದ- ೬ ಅಂಗ ಗ್ರಂಥಗಳನ್ನು ಅಧ್ಯಾಯನ ಮಾಡಬೇಕು.
೧. ಶಿಕ್ಷೆ: - ವರ್ಣ ಹೇಗೆ ಉಚ್ಛಾರಣೆ ಮಾಡಬೇಕು.
೨. ಕಲ್ಪ - ಪೂಜೆ ಪದ್ದತಿ ಅನುಷ್ಠಾನ.
೩. ನಿರುತ್ತ - ಒಂದೊಂದು ಶಬ್ಧವನ್ನು ಚಾಲಿಕೆ ಶಕ್ತಿ. - ಅಗ್ನಿ - ಅದು ಭಗವಂತ.
೫. ವ್ಯಾಕರಣ -ಉಚ್ಛಾರಣೆ.
೬. ಜ್ಯೋತಿಷ್ಯ - ಕಾಲದ ಪರಿಚಯ. ಉದಾ:- ವಸಂತ
ಕಾಲ.
೬ ಅಂಗಾಂಗ ಶಾಸ್ತ್ರಗಳ ಪರಿಚಯ - ಕಿವಿಯ ದೇವತೆ
ವರುಣ ದೇವತೆ.
ಕಾಮ್ಯ ಶಾಸ್ತ್ರಗಳು ಶಾಸ್ತ್ರದ ಪರಿಚಯ ಮಿತ್ರ.
ನೀತಿ ಶಾಸ್ತ್ರ - ಜೀವನದಲ್ಲಿ ನೀತಿ ಪರಿಚಯ
- ಕುಬೇರ.
ದೇವತೆಗಳು ಅಧೀನ ದೇವರಿಗೆ. ಜ್ಞಾನದ ಪ್ರಕಾಶ
- ಅಧಿಕ ಜ್ಞಾನ - ಪುರುಷೋತ್ತಮ ವರ್ಣಗಳ ಉಚ್ಛಾರಣೆಗೆ
ಹಲ್ಲು ಬೇಕು.
ನನಗೆ ಯಾವುದು ಇಷ್ಟ ಅದನ್ನು ಮಾಡದೆ ಇರುವಹಾಗೆ ಮಾಡುವದು ಭಗವಂತನೆ. ಅದು ಸಿಗದಿದ್ದರೆ ಇನೊಬ್ಬರಮೇಲೆ ಹಾಕುತ್ತೇವೆ. ಅದು ಸಿಗುವ ಹಾಗೆ ಮಾಡುವುದು ಭಗವಂತನೆ. ಇಂದ್ರಾಭಿಮಾನಿ ದೇವತೆಗಳು ಸಮರ್ಥರು. ಭಗವಂತ ಸಮರ್ಥ.
ಮನುಷ್ಯರೆ ಸಮರ್ಥರಲ್ಲ. ಶರೀರದಲ್ಲಿ ಅಧಿಕೃತರಾಗಿರುವರು - ಅದ್ಯಾತಂ.
ಪಿಂಡಾಂಗದಲ್ಲಿ ಸಂಯೋಗವಿದೆ. ವಿಯೋಗ ಒಳ್ಳೆ ಕೆಲಸದಲ್ಲಿ
ಮಾತ್ರ.
ಸುಖವನ್ನು ಕೊಡುವದು ವೇದ - ಹಿರಣ್ಯ.
ತತ್ತ್ವಾಭಿಮಾನಿ ದೇವತೆಗಳನ್ನು ತಿಳಿದುಕೊಳ್ಳಬೇಕು. ಮನಸ್ಸಿನಲ್ಲಿ ಗೊತ್ತಾಗಬೇಕು. ಉಪಾಸನೆಗೆ ಯೋಗ್ಯನಾಗಿದ್ದರೆ, ಉಪದೇಶ ಮಾಡುವ ಗುರು ಸಿಗುತ್ತಾನೆ.
ಸತ್ಯ - ಭಗವಂತನೆ ಸತ್ಯ.
ಸತ್ಯ = ಸತ್/ತಿ/ಯ ಶಬ್ದಗಳು.
ಸತ್ = ಸರ್ವೋತ್ತಮ = ನಿರ್ದೋಶ ತಿ = ಪೂರ್ಣತ್ವ = ವಿಸ್ತಾರ ಯ = ಸರ್ವಜ್ಞ =ಜ್ಞಾನ
ಪ್ರಾಣ, ಬ್ರಹ್ಮ. ಸೂರ್ಯ ೩ ದೇವತೆಗಳು
ಹೇಳುವ ಶಬ್ಧ. ಈ ಮೂರಕ್ಕು ನಿಯಾಮಿಕನಾಗಿದ್ದಾನೆ ಭಗವಂತ.
ಈ ಮೂರು ಸೇರಿದ್ದಾರೆ ಪಿಂಡಾಂಗದಲ್ಲಿ.
ಬಿಳಿಯ ಭಾಗ - ಶುಕ್ಲ. ಕಪ್ಪು ಭಾಗ - ಕೃಷ್ಣ ಕಣ್ಣು ದೊಡ್ಡ ಸಂಪತ್ತು.
ಇದನ್ನೆಲ್ಲ ತಿಳಿದುಕೊಂಡವರು ಸುಳ್ಳು ಹೇಳಿದರೂ
ಪಾಪ ಬರುವುದಿಲ್ಲ.
ಅನ್ನಕ್ಕೆ ಅಭಿಮಾನಿ ದೇವತೆ - ಬ್ರಹ್ಮ ಅನ್ನದ ಮೂಲ ಶಬ್ಧ ಅತಿನಾದ. ವೇದಗಳ ಶಬ್ಧ ಉಚ್ಛಾರಣೆ ಮಾಡುವದು ಬ್ರಹ್ಮ ದೇವತೆ. ಈ ಉಪಾಸನೆಗೆ ಯೋಗ್ಯರಾಗಿರುವರು ಋಷಿಗಳು, ದೇವತೆಗಳು. ಮನುಷ್ಯರಿಗೆ ದೋಷ ಉಂಟು.
ನಮ್ಮನ್ನು ಎರಡು ಹಗ್ಗದಿಂದ ಕಟ್ಟಿಹಾಕಿದ್ದಾನೆ, ೯ ಬಾಗಿಲು ತೆಗೆದಿದ್ದಾನೆ
ಭಗವಂತ.
ವಾಕ್ ತಂತಿ(ಹಗ್ಗ): -ಮಾತಿನ ಹಗ್ಗದಿಂದ, ವೇದದ ಹಗ್ಗದಿಂದ ಕಟ್ಟಿ ಹಾಕಿದ್ದಾನೆ. ಭಗವಂತನು ದೇವತೆಗಳಿಗೆ ಆಜ್ಞೆ ಮಾಡುತಾನೆ. ಇದನ್ನು ಪರಿಪಾಲಿಸುತ್ತಾರೆ
ದೇವತೆಗಳು.
ದೇವತೆಗಳ ನಾಮದಿಂದ ನಮ್ಮನ್ನು ಕಟ್ಟಿಹಾಕಿದ್ದಾನೆ
ಭಗವಂತ.
ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ನಾಮದಿಂದ ಕಟ್ಟಿ ಹಾಕಿದ್ದಾನೆ.
ವೇದ ರೂಪ ಮಾತು - ೧ ಹಗ್ಗ.
ಬ್ರಹ್ಮಾದಿ ಆಂಗಗಳು -೧ ಹಗ್ಗ.
ವೇದವನ್ನು ಛಂದಸ್ಸೆಂದು ಕರಿಯುತ್ತಾರೆ. ವೇದ
ಅಪೌರುಷೇಯ. ಪ್ರಳಯದಲ್ಲೂ ಭಗವಂತ ವೇದವನ್ನು ರಕ್ಷಣೆ ಮಾಡುತ್ತಾನೆ. ಭಗವಂತನಿಗೆ ನಾಶವಿಲ್ಲ. ಆದುದರಿಂದ ವೇದಕ್ಕೂ ನಾಶವಿಲ್ಲ
೧. ಭಗವಂತನ ರೋಮ - ಉಷ್ಣಕ್
೨. ಚರ್ಮ - ಗಾಯತ್ರಿ - ೨೪ ಅಕ್ಷರದ ಗಾಯತ್ರಿ
೩. ಮಾಂಸ - ತ್ರಿಷ್ಟುಪ್ - ೪೪ ಅಕ್ಷರದ ಮಂತ್ರ. ೧ ಪಾದದಲ್ಲಿ ೧೧ ಅಕ್ಷರ. ೯೪ ಪಾದ)
೪. ಬೃಹತಿ - ೩೬ ಅಕ್ಷರ - ೧ ಪಾದದಲ್ಲಿ ೯ ಅಕ್ಷರ
- ೪ ಪಾದ - ಪ್ರಾಣದಲ್ಲಿ.
೫. ಪಂಕ್ತಿ - ೧೦ ಜನ ಕೂಡಬೇಕು - ೧೦ ಅಕ್ಷರ
- ೪ ಪಾದ - ೪೦ ಅಕ್ಷರ.
೬. ಜಗತಿ - ಎಳುಬಿನಲ್ಲಿ ಏಳು೪ ಆದ - ೧ ಪಾದದಲ್ಲಿ
೧೨ ಅಕ್ಷರ - ೪೮ ಅಕ್ಷರ.
೭. ಛಂದಸ್ಸು
ವರ್ಣ - ನಿತ್ಯ - ಎಲ್ಲಾಕಡೆ ಇದೆ.
ರೋಮದಲ್ಲಿ ಅಭಿಮಾನಿ ದೇವತೆ ಉಷ್ಣಕ್
ಪ್ರಾಣದಲ್ಲ್ಲಿ - ಬೃಹತಿ
ಮಾಂಸ - ಅಜ್ಞಾನ.
ಇದು ತಿಳಿದವರಿಗೆ ಪಾಪ ಬರುವದಿಲ್ಲ.
ಇಡೀ ಜಗತ್ತನ್ನು ತಿರಿಗಿಸಿರುತ್ತಾನೆ ಭಗವಂತ. ಸಂಪತ್ತನ್ನು ಮುಚ್ಚಿ ಇಟ್ಟ್ಟಿಕೊಂಡಿರುತ್ತಾನೆ ಭಗವಂತ. ನಮ್ಮನ್ನು ಅವನ ಶರೀರದಲ್ಲಿ ರಕ್ಷಣೆ ಮಾಡಿದ್ದಾನೆ.
ಭಗವಂತನ ವಿಭೂತಿ ಚಿಂತನೆ.
ಭಗವಂತ ಮುಖದಿಂದ ಪೃಥ್ವಿ, ಅಗ್ನಿ ಸೃಷ್ಟಿ ಮಾಡಿದ.
ಪೃತ್ವಿ ಗಿಡ ಮರಗಳಿಂದ ಔಷದಿ ಮೂಲಿಕೆಗಳನ್ನು
ಕೊಡುತ್ತದೆ. ಅಗ್ನಿ ಪಕ್ವವಾದ ಆಹಾರವನ್ನು ಕೊಡುತ್ತದೆ. ಇದನ್ನು ಭಗವಂತ ಸ್ವೀಕಾರ
ಮಾಡುತ್ತಾನೆ. ಇದರ ಅರ್ಥ ನಾವು ಹರಿಯನ್ನು ಚಿಂತಿಸಬೇಕು
ಅಂತ. ಹೀಗೆ ಉಪಾಸನೆ ಮಾಡುವವನು ಯೋಗ್ಯ ವ್ಯಕ್ತಿ.
ವೇದದಿಂದ ಅಪರೋಕ್ಷ ಜ್ಞಾನ ಪಡೆಯುವನು ಯೋಗ್ಯ. ಇಂದ್ರಿಯಗಳಿಗೆ ನೇರ ಜ್ಞಾನ ಅಪರೋಷ ಜ್ಞಾನ. ಕೇಳಿ ತಿಳಿದುಕೊಳ್ಳೂವದು ಪರೋಕ್ಷ ಜ್ಞಾನ. ಶಬ್ಧದಿಂದ ಜ್ಞಾನಾರೋಕ್ಷ ಜ್ಞಾನ. ಪರೋಕ್ಷ ಜ್ಞಾನದಿಂದ ಭಗವಂತನ ಅನುಗ್ರಹ ಆಗುತ್ತೆ.
ಶ್ರವಣ, ಮನನ, ನಿರಂತರ ಧ್ಯಾನ ಮಾಡುವವರು ಅಪರೋಕ್ಷಿ ಜ್ಞಾನಿಗಳು.
ಭಗವಂತನ ಪ್ರಾಣದಿಂದ ಅಂತರಿಕ್ಷ/ ವಾಯು ಸೃಷ್ಟಿ.
ಅಂತರಿಕ್ಷ ಅಭಿಮಾನಿ ದೇವತೆ ಆಕಾಶ. ಆಕಾಶದ ಅಭಿಮಾನಿ ದೇವತೆ ಗಣಪತಿ.
ವಾಯುವಿನ ಅಭಿಮಾನಿ ದೇವತೆ ಪ್ರವಾಹ ವಾಯು.- ತಿರುಗಾಡುವ
ವಾಯು.
ಪ್ರವಾಹ ವಾಯುವಿನ ಅಭಿಮಾನಿ ದೇವತೆ ಭೂತ ವಾಯು
- ಪರಿಮಳವನ್ನು ಮುಟ್ಟಿಸುತ್ತಾನೆ. ಮುಖ್ಯ ವಾಯು ದೇವರು ಭಕ್ತಿ ಇಂದ ಮಾಡಿದ ಪುಣ್ಯ ಕರ್ಮವನ್ನು ಭಗವಂತನಿಗೆ ಅರ್ಪಿಸುತ್ತಾರೆ. ಭಗವಂತ ಎಲ್ಲಿವರಗೆ ಆಕಾಶವಿದೆ ಅಲ್ಲಿವರೆಗೆ ವ್ಯಾಪ್ತಿ.
ಭಗವಂತನು ಕಣ್ಣಿನಿಂದ ಸೂರ್ಯ, ದ್ಯೌ ಲೋಕ ಸೃಷ್ಟಿ ಮಾಡಿದ.
ಸೂರ್ಯ ಬೆಳಕು ಕೊಟ್ಟ. ಭಗವಂತನಿಗೆ ಪ್ರಕಾಶ ಒಪ್ಪಿಸಿದ. ದ್ಯೌ ಲೋಕ ಮಳೆ ಸುರಿಸುತ್ತದೆ. ಇದನ್ನು ಉಪಾಸನೆ ಮಾಡುವವನಿಗೆ ದ್ಯೌ ಲೋಕ ಶಾಶ್ವತವಾಗಿ ಉಳಿಯುತ್ತೆ. ಯಥಾ ಶಕ್ತಿಯಾಗಿ ದ್ಯೌ, ಸೂರ್ಯ ಮಾಡುತ್ತಾರೆ.
ಕಿವಿ ಇಂದ ದಿಕ್ ದೇವತೆಗಳನ್ನು ಸೃಷ್ಟಿ ಮಾಡಿದ. ದಿಕ್ ದೇವತೆಗಳ ಎಲ್ಲಾ ಶಬ್ಧಗಳೂ ಭಗವಂತನ ಕಿವಿಗೆ ಸೇರಿತು.
ತ್ರಿಲೋಕ/ಚಂದ್ರ -ಭಗವಂತನ ಕಿವಿ ದಿವ್ಯ ಸ್ಥಾನ. ಅಧಿಕಾರಿಗಳಿಗೆ ಚಂದ್ರ ಲೋಕ ಸಿಗುತ್ತೆ. ಭಗವಂತ ಮನಸ್ಸಿನಿಂದ
ನೀರು ಸೃಷ್ಟಿ ಮಾಡಿದ. ವರುಣ ನೀರನ್ನು ರಕ್ಷಣೆ ಮಾಡುತ್ತಾನೆ. ನೀರು ಶ್ರದ್ದೆಯ ಸಂಕೇತ. ಮನಶುದ್ಧಿಗೆ ನಿಮಿತ್ತ ನೀರು. ಎಲ್ಲಾ ದೇವತೆಗಳು ನೀರಿನ ಅಭಿಮಾನಿಗಳು.ಬ್ರಹ್ಮ ಜ್ಞಾನದಲ್ಲಿ
ಶ್ರದ್ದೆ - ವಿಷ್ಣುವಿನಲ್ಲಿ ಶ್ರದ್ದೆ. ಭಕ್ತಿ, ತತ್ತ್ವ ಜ್ಞಾನ - ಮುಖ್ಯ
ವಾಯು. ವಿಘ್ನಗಳಿಗೆ ನಿಯಾಮಕ ಗಣೇಶ. ಆಪಾಃ - ಬ್ರಹ್ಮಾದಿ
ದೇವತೆಗಳ ಹೆಸರು. ಭಗವಂತ - ಗಿರಿ - ಎಲ್ಲವನ್ನು ನುಂಗುವನು ಭಗವಂತ - ಚಕ್ಷುಃ - ಎಲ್ಲವನ್ನು ನೋಡುತ್ತಾನೆ
ನಮ್ಮ ಒಳಗಿನ ಆಸೆಯನ್ನು ಕಣ್ಣು ಹೇಳುತ್ತೆ. ಪ್ರತ್ಯಕ್ಷವಾಗಿ ನೋಡಿ ಹೇಳುವದು ಕಣ್ಣು. ನಮ್ಮ ಶತ್ರು
ಪಾಪ. ಆ ಪಾಪವನ್ನು ಭಗವಂತ ನುಂಗಿಹಾಕುತ್ತಾನೆ. ಅವನು ಮೃತ್ಯು ಇಲ್ಲದವನು. ಮರಣ ಇಲ್ಲದೆ ಇರುವದು ಮೋಕ್ಷ. ಅಮೃತ ಅಂದರೆ ಮೋಕ್ಷ. ದೇವತೆಗಳಿಗೆ ಮೋಕ್ಷ ಕೊಡುವವನು. ಮರಣವನ್ನು ಕೊಡುವವನು ಅವನೇ. ಸುಪ್ತ ಪ್ರಬುದ್ದ ನ್ಯಾಯದಿಂದ
ವೇದ ಕಂಡಿರುವವನು ಋಷಿ. ವೈದೀಕ ಸಾಹಿತ್ಯವನ್ನು (ಮಂತ್ರ)
ನಮ್ಮ ಮುಂದೆ ಇಡುವವನು ಋಷಿ. ನಮ್ಮ ಒಳಗೆ ವಾಯು ಶಕ್ತಿ ಮೇಲಕ್ಕೂ ಹೋಗುತ್ತೆ, ಕೆಳಕ್ಕೂ ಬರುತ್ತೆ. ಪ್ರಾಣ ಅಪಾನವನ್ನು ಮೇಲೆ ಕೆಳಗೆ ಮಾಡುತ್ತಾನೆ. ವಾಯು ದೇವರು ಅರ್ಮತ್ಯರು. ವಾಯು ದೇವರು ನಿತ್ಯ. ಜ್ಞಾನ ಲೋಪವಿಲ್ಲ. ಅವರ ಶರೀರಕ್ಕೆ ನಾಶ. ಅವರಿಗೆ ನಾಶವಿಲ್ಲ. ವಾಯು ದೇವರು
ಸ್ವರೂಪತಃ ನಿತ್ಯ. ವಾಯು ದೇವರು ಯಾರಿಗೂ
ಕಾಣಿಸುವದಿಲ್ಲ. ಶರೀರ ಎಲ್ಲರಿಗೂ ಕಾಣಿಸುತ್ತದೆ. ಭಗವಂತ ಶರೀರಕ್ಕೆ ಎಂದೂ ನಾಶವಿಲ್ಲ. ಎಲ್ಲಾ ಶರೀರವೂ ಮೃತ್ಯು ಹೊಂದುತ್ತದೆ. ಇದನ್ನು ತಿಳಿದುಕೊಂಡವರು
ಅಮೃತರಾಗುತ್ತಾರೆ. ಮೋಕ್ಷವನ್ನು ಪಡಿಯುತ್ತಾರೆ. ರುದ್ರ
ದೇವರಿಗೆ, ಪಾರ್ವತಿ ದೇವಿಗೆ ಮೋಕ್ಷವಿಲ್ಲ. ಜನಾರ್ದನ ಅಂದರೆ ಪ್ರಾಣ ದೇವರು. ಜನನ ಮರಣವನ್ನು ಮರ್ದನೆ
ಮಾದುವವರು. ಪಿಂಡಾಂಗ ಯಜಮಾನರು ವಾಯು ದೇವರು. ಬ್ರಹ್ಮ - ವಾಸುದೇವ ರೂಪ - ಮೋಕ್ಷ ಕೊಡುವವನು. ಆನಂದ ರೂಪ ಮೋಕ್ಷ. ದುಃಖ ಪರಿಹಾರ ಮೋಕ್ಷದಲ್ಲಿ. ಬ್ರಹ್ಮ - ಗುಣಪರಿಪೂರ್ಣ
- ಬ್ರಹ್ಮತ್ವ ಕೊಡುವವನು. ಪಂಥಾಃ - ಸಂಕರ್ಷಣ - ತನ್ನಲ್ಲಿ ಬರುವ ಹಾಗೆ ಮಾಡುತ್ತಾನೆ. ಪ್ರದ್ಯುಮ್ನ
- ಸೃಷ್ಟಿಕರ್ತ - ಶರೀರ ಕೊಡುವವನು. ಶರೀರ ಬೆಳೆಯುವ ಸಂಪತ್ತು. ಅನಿರುದ್ದ - ಕರ್ಮ - ಸ್ಥಿತಿ ಪ್ರವರ್ತಕ,
ಸಂರ್ಕ್ಷಣೆ. ಜ್ಞಾನದಿಂದ ರಕ್ಷಣೆ ಮಾಡುವವನು. ಎರಡು ಕಣ್ಣಿನ ಮಧ್ಯೆ ಮೂಗು ಸ್ವಲ್ಪ ತಗ್ಗಿರುವ ಭಾಗ ಸೂರ್ಯ
ಸ್ಥಾನ.
ಭಗವಂತನದು ೨ ರೂಪಗಳು.
ಉದರದಲ್ಲಿ - ೧
ಹೃದಯದಲ್ಲಿ - ೧. ಹೃದಯದಲ್ಲಿ ತೇ ರೂಪ.
ಹೃದಯ ರೂಪ, ಉದರ ರೂಪ - ವಿಶ್ಲೇಷಣೆ ಆಚಾರ್ಯರದು.
ಒಬ್ಬನೆ ದೇವರಾದರೂ ತಾ ಅಂತ ಹೇಳಿದೆ. ದೇಶತಃ ಬಲವಂತ ಏಕಮೇವ ರೂಪ.
ಕಾಲತಃ - ರಾಮ/ಕೃಷ್ಣ/ಕಲ್ಕಿ - ರೂಪದಲ್ಲಿ ವ್ಯತ್ಯಾಸವಿಲ್ಲ.
ವ್ಯಾಸ ಅವತಾರ - ಜ್ಞಾನ ಕಾರ್ಯ.
ಕೃಷ್ಣ ಅವತಾರ - ಬಲ ಕಾರ್ಯ.
ರಾಮ/ಪರಶುರಾಮ - ಬಲದಲ್ಲಿ ವ್ಯತ್ಯಾಸ.
ಕರ್ಮಜ ದೇವತೆಗಳಿಗೆಲ್ಲ ಅಧಿಕ ದೇವತೆ. ವಿಷ್ಣುವೂ
ಅದಿ ದೇವತೆ ಅಲ್ಲ.
ನಾರಾಯಣ ಒಬ್ಬನೆ ಅದಿ ದೇವತೆ.
ದಿಗ್ ದೇವತೆಗಳಿಗೆ ಮಾಡುವ ಸ್ತೋತ್ರ ಭಗವಂತ ಕಿವಿಯಿಂದ
ಕೇಳುತ್ತಾನೆ.
ದೇವತೆಗಳೂ ಭಗವಂತನ ಆಜ್ಞೆಯಿಂದ ಬರುತ್ತಾರೆ. ಬಗವಂತನೆ ಕರ್ಮವನ್ನು ಮಾಡಿಸಿ ಫಲವನ್ನು ಕೊಡುತ್ತಾನೆ. ಅವನು
ಸ್ವತಂತ್ರ. ಭಗವಂತ ಕರ್ಮಕ್ಕೆ ಪ್ರವರ್ತಕ.
ಆಚಾರ್ಯರು - ಸಿಂಹಾವಲೋಕ ಮಾಡಿ ವ್ಯತ್ಯಾಸ ಮಾಡಿದ್ದಾನೆ
ಭಗವಂತ.
ಸಂಕಲನ: - ಜೆ. ಸುಧೀಂದ್ರ ಸಿಂಹ, ಬೆಂಗಳೂರು.